ನವದೆಹಲಿ:ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. 2020-21ರಲ್ಲಿ 4. 14 ಕೋಟಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 2014-15ರಿಂದ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ 21ರಷ್ಟು ಅಂದರೆ ಸರಿ ಸುಮಾರು 72 ಲಕ್ಷ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಉನ್ನತ ಶಿಕ್ಷಣದ ಮೇಲಿನ ಅಖಿಲ ಭಾರತ ಸಮೀಕ್ಷೆ (ಎಐಎಸ್ಎಚ್ಇ) 2020-2021 ತಿಳಿಸಿದೆ.
ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. 2014-15ಕ್ಕೆ ಹೋಲಿಕೆ ಮಾಡಿದರೆ, 2020-21ರಲ್ಲಿ ಈ ದಾಖಲಾತಿ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪದವಿ ಮುಗಿಸಿ, ಉನ್ನತ ಶಿಕ್ಷಣಕ್ಕೆ ದಾಖಲಾಗುವ ವಿದ್ಯಾರ್ಥಿಗಳಲ್ಲಿ ಶೇ 33.5ರಷ್ಟ ಮಂದಿ ಕಲಾ ವಿಭಾಗಕ್ಕೆ ದಾಖಲಾದರೆ, ಶೇ 15.5ರಷ್ಟು ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಮತ್ತು ಶೇ 13.9ರಷ್ಟು ಮಂದಿ ವಾಣಿಜ್ಯ ವಿಭಾಗ ಹಾಗೂ ಇಂಜಿನಿಯರಿಂಗ್ ಮತ್ತು ತಾಂತ್ರಿಕತೆಗೆ ಶೇ 11.9 ರಷ್ಟು ಮಂದಿ ದಾಖಲಾಗಿದ್ದಾರೆ.
ಯಾವ ವಿಭಾಗಕ್ಕೆ ಎಷ್ಟು ಮಂದಿ: ಉನ್ನತ ಶಿಕ್ಷಣದಲ್ಲಿ ಅಧಿಕ ಪ್ರಮಾಣದಲ್ಲಿ ಎಂದರೆ ಶೇ 20. 56ರಷ್ಟು ಮಂದಿ ಸಮಾಜ ವಿಜ್ಞಾನ ದಾಖಲಾದರೆ, ಶೇ 14. 83ರಷ್ಟು ಮಂದಿ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡಿದ್ದಾರೆ. ಒಟ್ಟಾರೆ ವಿಜ್ಞಾನ ಭಾಗದಲ್ಲಿ ಶೇ 55.5 ಲಕ್ಷ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಂಡಿದ್ದಾರೆ, ಇದರಲ್ಲಿ ಶೇ 29.5 ಮಹಿಳಾ ವಿದ್ಯಾರ್ಥಿಗಳು, ಶೇ 26 ಲಕ್ಷ ಮಂದಿ ಪುರುಷ ವಿದ್ಯಾರ್ಥಿಗಳಾಗಿದ್ದಾರೆ. ಎಐಎಸ್ಎಚ್ಇ 2020-21 ಅನುಸಾರ, ಶೇ 79.06 ರಷ್ಟು ಮಂದು ಪದವಿಗೆ ದಾಖಲಾಗಿದ್ದಾರೆ. ಶೇ 11.5ರಷ್ಟು ಮಂದಿ ಉನ್ನತ ಶಿಕ್ಷಣಕ್ಕೆ ದಾಖಲಾಗಿದ್ದಾರೆ. ಇದರಲ್ಲಿ 2020-21ರಲ್ಲಿ 95.4 ಮಂದಿ ಉತ್ತೀರ್ಣರಾಗಿದ್ದರೆ, 2019-20ರಲ್ಲಿ 94 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮಹಿಳಾ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ: ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. 1. 88 ಕೋಟಿ ಯಿಂದ 2. 01ಕೋಟಿಗೆ ಏರಿಕೆಯಾಗಿದೆ. 2014 -15ರಲ್ಲಿ ಶೇ 45ರಷ್ಟಿದ್ದ ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ 2020- 21ರಲ್ಲಿ ಶೇ 49ರಷ್ಟು ಏರಿಕೆ ಕಂಡು ಬಂದಿದೆ. 2011ರ ಜನಸಂಖ್ಯಾ ಅಂಕಿ ಅಂಶದ ಅನುಸಾರ 18ರಿಂದ 23ವರ್ಷದ ಗುಂಪಿನವರು ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವ ಒಟ್ಟಾರೆ ದಾಖಲಾತಿ ಅನುಪಾತ (ಜಿಇಆರ್) ಶೇ 25.6ರಿಂದ ಶೇ 27. 6ಕ್ಕೆ ಏರಿಕೆ ಕಂಡಿದೆ.