31.05.13:ದೂರದರ್ಶನ ಮತ್ತು ಸಿನಿಮಾ ನಟ ಅಬೀರ್ ಗೋಸ್ವಾಮಿ (38) ತಮ್ಮ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಮಧ್ಯಾಹ್ನ 1.50ರ ಸುಮಾರಿಗೆ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಯಿತಾದರೂ ಆಸ್ಪತ್ರೆ ಸೇರುವ ಮುನ್ನವೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
04.07.2013: ಸಿನಿಮಾ ಕ್ಷೇತ್ರದಲ್ಲಿ ಮಿಂಚುವ ಹಂಬಲದಿಂದ ಚಿತ್ರರಂಗಕ್ಕೆ ಪದಾರ್ಪಣೆ ದೊಡ್ಡಬಳ್ಳಾಪುರ ಮೂಲದ ಕನ್ನಡದ ನಟ ಹೇಮಂತ್ (27) ಅವರು ಹೆಬ್ಬಾಳದ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು.ಹೇಮಂತ್ ಜಿಮ್ ಮಾಡುತ್ತಿದ್ದ ವೇಳೆ ಎದೆನೋವು ಎಂದರು. ತಕ್ಷಣ ಅವರನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ರವಾನಿಸಲಾಯ್ತು.
ನಂತರ M S ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೂ ಅವರು ಬದುಕುಳಿಯಲಿಲ್ಲ. ನಿರ್ಮಾಪಕ ಜಿ ರಾಮಕೃಷ್ಣ ಅವರ ಪುತ್ರ, ಹೇಮಂತ್ ಮಾರ್ಚ್ 2013 ರಲ್ಲಿ ಬಿಡುಗಡೆಯಾದ ತಮ್ಮ ಚೊಚ್ಚಲ ಚಿತ್ರ 'ನೆನಪಿನಂಗಳ'ದಲ್ಲಯೇ ಹೊಸ ಭರವಸೆ ಹುಟ್ಟುಹಾಕಿದ್ರು.
14.07.2017:ಹೈದರಾಬಾದ್‌ನಲ್ಲಿ ಡೆಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವರುಣ್ ಕುಮಾರ್ ಎಂಬ 22 ವರ್ಷದ ಟೆಕ್ಕಿಯೊಬ್ಬರು ಮಾದಾಪುರದದಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಕುಸಿದು ಬಿದ್ದು ಇಹಲೋಕ ತ್ಯಜಿಸಿದರು.
20.05.17:ಕೋಲ್ಕತ್ತಾದಲ್ಲಿ ಐಬಿಎಂನ ಸಿಸ್ಟಂ ಇಂಜಿನಿಯರ್ ಆಗಿದ್ದ ಮೈಸೂರು ಮೂಲದ ಅಮರ್ ಎಂ(31), ನ್ಯೂ ಟೌನ್ ಕಚೇರಿಯ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಾಗ ಕುಸಿದು ಬಿದ್ದು ಸಾವನ್ನಪ್ಪಿದರು. ಅತಿಯಾದ ವ್ಯಾಯಾಮದ ಅಪಾಯಗಳನ್ನು ವೈದ್ಯರು ಈ ವೇಳೆ ಒತ್ತಿಹೇಳಿದರು. ಕೋಲ್ಕತ್ತಾದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದರು.