ಜೈಪುರ: ಜೈಪುರದ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಚಿಕ್ಕಮ್ಮ ಅವರ ಮನೆಯಲ್ಲಿ 3 ದಿನಗಳಲ್ಲಿ ಎರಡು ಬಾರಿ ಕಳ್ಳತನ ನಡೆದಿದೆ.
ಫೆಬ್ರವರಿ 8 ರ ರಾತ್ರಿ ಕಳ್ಳತನ ನಡೆದಿದೆ. ಮತ್ತೆ ಫೆಬ್ರವರಿ 10 ರಂದು ಮತ್ತೊಮ್ಮೆ ಬೀಗ ಮುರಿದು ಮನೆಗೆ ನುಗ್ಗಿ ಮನೆಯ ಪೀಠೋಪಕರಣಗಳನ್ನು ಕದ್ದೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಎಫ್ಐಆರ್ ದಾಖಲಿಸಿರುವ ಪೊಲೀಸರು ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.