ಕರ್ನಾಟಕ

karnataka

ETV Bharat / bharat

ಸಹಾಯಕ ಆಯುಕ್ತೆ ಮೇಲೆ ವ್ಯಾಪಾರಿ ಅಟ್ಯಾಕ್.. ಮೂರು ಬೆರಳು ಕಟ್.. - a peddler attacked an assistant commissioner and cut off three fingers

ಥಾಣೆ ಮುನ್ಸಿಪಲ್ ಕಾರ್ಪೊರೇಶನ್​ನಲ್ಲಿ ಅನಧಿಕೃತ ಅಂಗಡಿ ನಿರ್ಮಾಣ ಮತ್ತು ದಂಧೆಕೋರರ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ಕಳೆದ ಹಲವು ದಿನಗಳಿಂದ ವಿಚಾರಣೆ ನಡೆಸಿ ಕ್ರಮಕೈಗೊಳ್ಳುತ್ತಿದೆ. ಇಂದು ಇದೇ ರೀತಿಯ ಕಾರ್ಯಾಚರಣೆ ನಡೆಸುತ್ತಿದ್ದಾಗ ತರಕಾರಿ ಮಾರಾಟಗಾರ ಅಮರ್​ಜಿತ್​ ಯಾದವ್​, ಕಲ್ಪಿತಾ ಪಿಂಪಲ್​ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾನೆ..

ಸಹಾಯಕ ಆಯುಕ್ತೆ ಮೇಲೆ ವ್ಯಾಪಾರಿ ಅಟ್ಯಾಕ್
ಸಹಾಯಕ ಆಯುಕ್ತೆ ಮೇಲೆ ವ್ಯಾಪಾರಿ ಅಟ್ಯಾಕ್

By

Published : Aug 30, 2021, 10:55 PM IST

ಥಾಣೆ(ಮಹಾರಾಷ್ಟ್ರ​) :ಅನಧಿಕೃತ ಅಂಗಡಿಗಳ ನಿರ್ಮಾಣಗಳನ್ನು ಪ್ರಶ್ನಿಸುತ್ತಿದ್ದ ವೇಳೆ ಘೋಡಬುಂದರ್​ನ ವ್ಯಾಪಾರಿಯೊಬ್ಬ ಸಹಾಯಕ ಆಯುಕ್ತೆ ಕಲ್ಪಿತಾ ಪಿಂಪಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾನೆ.

ಸಹಾಯಕ ಆಯುಕ್ತೆ ಮೇಲೆ ವ್ಯಾಪಾರಿ ಅಟ್ಯಾಕ್.. ಮೂರು ಬೆರಳು ಕಟ್..

ಘಟನೆಯಲ್ಲಿ ಅಧಿಕಾರಿಯ ಮೂರು ಬೆರಳುಗಳು ತುಂಡಾಗಿವೆ. ಗಾಯಾಳುವನ್ನು ಕೂಡಲೇ ಘೋಡಬುಂದರ್​ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಅವರ ಜತೆಗಿದ್ದ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.

ಥಾಣೆ ಮುನ್ಸಿಪಲ್ ಕಾರ್ಪೊರೇಶನ್​ನಲ್ಲಿ ಅನಧಿಕೃತ ಅಂಗಡಿ ನಿರ್ಮಾಣ ಮತ್ತು ದಂಧೆಕೋರರ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ಕಳೆದ ಹಲವು ದಿನಗಳಿಂದ ವಿಚಾರಣೆ ನಡೆಸಿ ಕ್ರಮಕೈಗೊಳ್ಳುತ್ತಿದೆ. ಇಂದು ಇದೇ ರೀತಿಯ ಕಾರ್ಯಾಚರಣೆ ನಡೆಸುತ್ತಿದ್ದಾಗ ತರಕಾರಿ ಮಾರಾಟಗಾರ ಅಮರ್​ಜಿತ್​ ಯಾದವ್​, ಕಲ್ಪಿತಾ ಪಿಂಪಲ್​ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾನೆ.

ಆರೋಪಿಯನ್ನು ಕಾಸರವಾಡ್ವಾಲಿ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಪ ಪೊಲೀಸ್ ಆಯುಕ್ತ ವಿನಯ್ ರಾಥೋರ್​, ದಾಳಿಕೋರರನ್ನು ಬಂಧಿಸಿದ್ದೇವೆ. ಆತನ ವಿರುದ್ಧ ಕೊಲೆ ಯತ್ನ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details