ಕರ್ನಾಟಕ

karnataka

ETV Bharat / bharat

ಜ್ಯೋತಿಷಿಯ ಭವಿಷ್ಯ ನಂಬಿ ಮೇಕೆಯೊಂದಿಗೆ ವಿವಾಹವಾದ ಯುವಕ! - ಮೇಕೆಯೊಂದಿಗೆ ಮದುವೆಯಾದ ಯುವಕ

ಜ್ಯೋತಿಷಿಯ ಮಾತನ್ನು ನಂಬಿದ ಯುವಕನೊಬ್ಬ ಮೇಕೆಯೊಂದಿಗೆ ಮದುವೆಯಾದ ಘಟನೆ ಬೆಳಕಿಗೆ ಬಂದಿದೆ.

in-strange-incident-young-man-got-married-with-a-goat
ಜ್ಯೋತಿಷಿ ಭವಿಷ್ಯ ನಂಬಿ ಮೇಕೆಯೊಂದಿಗೆ ವಿವಾಹವಾದ ಯುವಕ!

By

Published : Apr 3, 2022, 4:10 PM IST

ಕೃಷ್ಣಾ(ಆಂಧ್ರಪ್ರದೇಶ): ನೆರೆಯ ಆಂಧ್ರಪ್ರದೇಶದಲ್ಲಿ ವಿಚಿತ್ರ ಮತ್ತು ಹಾಸ್ಯಮಯ ಘಟನೆಯೊಂದು ಬೆಳಕಿಗೆ ಬಂದಿದೆ. ಆಂಧ್ರದ ಕೃಷ್ಣಾ ಜಿಲ್ಲೆಯಲ್ಲಿ ಅಪರೂಪದ ವಿವಾಹವೊಂದು ಜರುಗಿದೆ. ಜ್ಯೋತಿಷಿಯ ಮಾತನ್ನು ನಂಬಿದ ಯುವಕನೊಬ್ಬ ಮೇಕೆಯೊಂದಿಗೆ ಮದುವೆಯಾದ ಘಟನೆ ನಡೆದಿದ್ದು, ಜನರು ಹೀಗೂ ಉಂಟಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೃಷ್ಣಾ ಜಿಲ್ಲೆಯ ನೂಜಿವೀಡು ಮೂಲದ ಯುವಕನೊಬ್ಬ ಮದುವೆಯಾಗಲು ಕನ್ಯೆ ಹುಡುಕಲು ಸಿದ್ಧತೆ ನಡೆಸಿದ್ದ. ಅದಕ್ಕಾಗಿ ಮನೆಯ ಹಿರಿಯರು ಜ್ಯೋತಿಷಿ ಬಳಿ ಜಾತಕ ತೆಗೆದುಕೊಂಡು ಹೋಗಿದ್ದು, ಆಗ ಜ್ಯೋತಿಷಿಯು ಹುಡುಗನಿಗೆ ಎರಡು ಮದುವೆಗಳು ಆಗುವ ಸಾಧ್ಯತೆಗಳಿವೆ. ಹೀಗಾಗಿ ಮೊದಲ ಬಾರಿಗೆ ಆತನಿಗೆ ಮೇಕೆಯೊಂದಿಗೆ ವಿವಾಹ ಮಾಡಿಸಿದರೆ ದೋಷವು ಪರಿಹಾರವಾಗುತ್ತದೆ ಎಂದು ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ.

ಜ್ಯೋತಿಷಿಯ ಭವಿಷ್ಯ ನಂಬಿ ಮೇಕೆಯೊಂದಿಗೆ ವಿವಾಹವಾದ ಯುವಕ!

ಜ್ಯೋತಿಷಿಯ ಮಾತನ್ನೇ ನಂಬಿದ ಯುವಕನೂ ಕೂಡ ಮೇಕೆಯೊಂದಿಗೆ ವಿವಾಹವಾಗಲು ಸಮ್ಮತಿ ಸೂಚಿಸಿದ್ದಾನೆ. ಅದರಂತೆ ವಿವಾಹಕ್ಕೆ ಎಲ್ಲ ಸಿದ್ಧತೆ ನಡೆಸಿದ ಆತನ ಮನೆಯವರು, ನೂಜಿವೀಡು ನವಗ್ರಹ ದೇವಸ್ಥಾನದಲ್ಲಿ ಮೇಕೆಯೊಂದಿಗೆ ವಿವಾಹ ಕಾರ್ಯ ನೆರವೇರಿಸಿದ್ದಾರೆ. ಯುಗಾದಿ ಹಬ್ಬದಂದು ಪುರೋಹಿತರ ಸಮ್ಮುಖದಲ್ಲಿ ಸಂಪ್ರದಾಯದಂತೆ ಮೇಕೆಯೊಂದಿಗೆ ಯುವಕನ ವಿವಾಹ ಜರುಗಿದೆ. ಮೇಕೆಯೊಂದಿಗೆ ಮೊದಲ ಮದುವೆ ನಡೆದಿರುವುದರಿಂದ, ಮತ್ತೊಂದು ಮದುವೆಯಾಗಲು ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಯುವಕನ ಮನೆಯವರ ನಂಬಿಕೆಯಾಗಿದೆ. ಮೇಕೆಯೊಂದಿಗೆ ವಿವಾಹ ಕಾರ್ಯ ನಡೆದಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:ವಿವಾದಕ್ಕೆ ಡೋಂಟ್​​ ಕೇರ್​.. ಮೈಸೂರಲ್ಲಿ ಹಲಾಲ್​ ಕಟ್​ ಮಾಂಸವನ್ನೇ ಖರೀದಿಸಿದ ಪ್ರಗತಿಪರರು

ABOUT THE AUTHOR

...view details