ಕರ್ನಾಟಕ

karnataka

ETV Bharat / bharat

ಅತ್ಯಾಚಾರ​ ಸಂತ್ರಸ್ತೆ ಮೇಲೆಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಮಾವ! - ಜಾರ್ಖಂಡ್​ ಮಹಿಳೆಗೆ ಬೆಂಕಿದ ಹಚ್ಚಿದ ಕುಟುಂಬಸ್ಥರು

ಜಾರ್ಖಂಡ್​ನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಮೇಲೆಯೇ ಆಕೆಯ ಕುಟುಂಬಸ್ಥರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ರೇಪ್​ ಸಂತ್ರಸ್ತೆ ಮೇಲೆಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಮಾವ!
ರೇಪ್​ ಸಂತ್ರಸ್ತೆ ಮೇಲೆಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಮಾವ!

By

Published : Jun 9, 2022, 8:46 PM IST

ಗಿರಿಧಿ(ಜಾರ್ಖಂಡ್​):ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದ ಮಹಿಳೆಯನ್ನು ಆಕೆಯ ಮಾವನೇ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಮಹಿಳೆಯ ದೇಹ ಭಾಗಶಃ ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಾರ್ಖಂಡ್​ನ ಗಿರಿಧಿ ಜಿಲ್ಲೆಯ ಬೆಂಗಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯನ್ನು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಇದನ್ನು ಗಂಡನ ಮನೆಯವರಿಗೆ ಹೇಳಿದಾಗ ಆಕೆಯ ಮೇಲೆಯೇ ಕ್ರುದ್ಧರಾಗಿ ಸೀಮೆಎಣ್ಣೆ ಹಾಕಿ ಸುಡಲು ಯತ್ನಿಸಿದ್ದಾರೆ.

ಇದನ್ನು ಕಂಡ ಜನರು ಆಕೆಯನ್ನು ರಕ್ಷಿಸಿದ್ದಾರೆ. ಆದರೆ, ಮಹಿಳೆಯ ದೇಹ ಅರ್ಧದಷ್ಟು ಸುಟ್ಟು ಹೋಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸಂತ್ರಸ್ತೆಯಿಂದ ಹೇಳಿಕೆ ಪಡೆದಿದ್ದಾರೆ.

'ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ಹೋದಾಗ ಪಕ್ಕದ ಮನೆಯ ವ್ಯಕ್ತಿಯೊಬ್ಬ ತನ್ನನ್ನು ತಡೆದು ಅನುಚಿತವಾಗಿ ವರ್ತಿಸಿದ. ವಿರೋಧಿಸಿದಾಗ ತನ್ನನ್ನು ಆತನ ಮನೆಯೊಳಗೆ ಎಳೆದೊಯ್ದು ಅತ್ಯಾಚಾರ ಮಾಡಿದ. ನಾನು ಕೂಗಿಕೊಂಡಾಗ ಜನರು ಸ್ಥಳಕ್ಕೆ ಬಂದರು. ಈ ವೇಳೆ ನನ್ನ ಗಂಡನ ಸಹೋದರನೂ ಕೂಡ ಅಲ್ಲಿಗೆ ಬಂದ. ಬಳಿಕ ನಡೆದ ಘಟನೆ ವಿವರಿಸಿದಾಗ ಜನರು ನನ್ನ ಮೇಲೆಯೇ ಹಲ್ಲೆ ಮಾಡಿದರು. ಬಳಿಕ ನನ್ನ ಕುಟುಂಬಸ್ಥರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ' ಎಂದು ಆಕೆ ತಿಳಿಸಿದ್ದಾರೆ.

ಇದನ್ನೂ ಓದಿ:ಸೋಶಿಯಲ್​ ಮೀಡಿಯಾ 'ಪ್ರೇಮ' ಕೊಲೆಯಲ್ಲಿ ಅಂತ್ಯ: ನೀಟ್​ ತಯಾರಿಯಲ್ಲಿದ್ದ ಗೆಳತಿಯ ಕೊಂದ ಗೆಳೆಯ!

ABOUT THE AUTHOR

...view details