ಜಮ್ಮು-ಕಾಶ್ಮೀರ: ಕುಲ್ಗಾಮ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಆರಂಭವಾಗಿದ್ದ ಎನ್‌ಕೌಂಟರ್‌ನಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಓರ್ವ ಭಯೋತ್ಪಾದನನ್ನು ಹೊಡೆದುರಳಿಸುವಲ್ಲಿ ಸೇನಾ ಹಾಗೂ ಕಾಶ್ಮೀರದ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಗ್ರರೊಂದಿಗಿನ ಜಂಟಿ ಹೋರಾಟದ ಆರಂಭದಲ್ಲೇ ದುರಾದುಷ್ಟವಶಾತ್ ಕಾಶ್ಮೀರದ ಪೊಲೀಸ್ ಸಿಬ್ಬಂದಿ ರೋಹಿತ್ ಕುಮಾರ್ ಚಿಬ್ ಹುತಾತ್ಮರಾಗಿದ್ದಾರೆ. ದಾಳಿ ವೇಳೆ 34 ಆರ್‌ಆರ್‌ನ ಮೂವರು ಸೈನಿಕರು ಹಾಗೂ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಕಾಶ್ಮೀರ ವಲಯದ ಐಜಿ ವಿಜಯ್ ಕುಮಾರ್ ತಿಳಿಸಿದ್ದಾರೆ.