ಅಹಮದಬಾದ್(ಗುಜರಾತ್):ಚಾರ್ವಾಡ ಗ್ರಾಮದ ವಾರ್ಡ್ ನಂ. 5ರಲ್ಲಿ ಉಮೇದುವಾರಿಕೆ ಸಲ್ಲಿಸಿದ ಸಂತೋಷ ಹಳಪಾಟಿ ಎಂಬ ಅಭ್ಯರ್ಥಿ ಕೇವಲ ಒಂದು ಮತ ಪಡೆದಿದ್ದಾರೆ. ಸಂತೋಷ್ ಅವರ ಪ್ರಕಾರ, ಅವರ ಕುಟುಂಬದಲ್ಲಿ ಅವರ ಪತ್ನಿ ಸೇರಿದಂತೆ ಒಟ್ಟು 12 ಸದಸ್ಯರಿದ್ದಾರೆ. ಆದರೆ, ಅವರ ಹೆಸರು ಬೇರೆ ವಾರ್ಡ್‌ನಲ್ಲಿ ನೋಂದಾಯಿಸಲ್ಪಟ್ಟಿದೆ.
ಇದರಿಂದಾಗಿ ಅವರು ಮತ ಪಡೆದಿಲ್ಲ. ಅದೇ ಹೆಸರಿನ ಮತ್ತೊಬ್ಬ ಅಭ್ಯರ್ಥಿ ಗಿರೀಶ್ ಪಟೇಲ್ 111 ಮತಗಳನ್ನು ಪಡೆದರೆ, ಭವೇಶ್ ಹಳಪಾಟಿ 81 ಮತಗಳನ್ನು ಪಡೆದಿದ್ದಾರೆ.