ಕರ್ನಾಟಕ

karnataka

ETV Bharat / bharat

ರಿಷಿ ಸುನಕ್ ಜೊತೆ ಪ್ರಧಾನಿ ಮೋದಿ ಮೊದಲ ಮಾತುಕತೆ: ಮುಕ್ತ ವ್ಯಾಪಾರ ಒಪ್ಪಂದ ಬಗ್ಗೆ ಚರ್ಚೆ - ಬ್ರಿಟನ್​ ಪಿಎಂ ರಿಷಿ ಸುನಕ್

ಬ್ರಿಟನ್​ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ರಿಷಿ ಸುನಕ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಇಂದು ರಿಷಿ ಸುನಕ್ ಅವರೊಂದಿಗೆ ಮಾತನಾಡಿ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

in-first-call-pm-modi-rishi-sunak-discuss-india-uk-free-trade-agreement
ರಿಷಿ ಸುನಕ್ ಜೊತೆ ಪ್ರಧಾನಿ ಮೋದಿ ಮೊದಲ ಮಾತುಕತೆ: ಮುಕ್ತ ವ್ಯಾಪಾರ ಒಪ್ಪಂದ ಬಗ್ಗೆ ಚರ್ಚೆ

By

Published : Oct 27, 2022, 11:03 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್​ ನೂತನ ಪ್ರಧಾನಿ ರಿಷಿ ಸುನಕ್ ಗುರುವಾರ ಮೊದಲ ಬಾರಿಗೆ ಮಾತುಕತೆ ನಡೆಸಿದರು.

ಈ ಬಗ್ಗೆ ಟ್ವೀಟ್​ ಮಾಡಿರುವ ಮೋದಿ, ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ. ಸಮಗ್ರ ಮತ್ತು ಸಮತೋಲಿತ ಮುಕ್ತ ವ್ಯಾಪಾರ ಒಪ್ಪಂದದ ಪ್ರಾಮುಖ್ಯತೆಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪ್ರತಿ ಮಗುವೂ ಬೆಳಗುವಂತೆ, ಭರವಸೆಯ ಬ್ರಿಟನ್​ ರೂಪಿಸುತ್ತೇವೆ: ಬ್ರಿಟನ್‌ನ ಪ್ರಧಾನಿ ಭರವಸೆ

ಇದಕ್ಕೆ ಪ್ರತಿಯಾಗಿ ರಿಷಿ ಸುನಕ್ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದು, ಎರಡು ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರಗಳ ದ್ವಿಪಕ್ಷೀಯ ಪಾಲುದಾರಿಕೆಯನ್ನು ಗಾಢವಾಗಿಸುವ ಮೂಲಕ ನಾವು ಏನಾದರೂ ಸಾಧಿಸಬಹುದು ಎಂಬುದರ ಕುರಿತು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಬ್ರಿಟನ್​ ಮತ್ತು ಭಾರತ ನಡುವೆ ತುಂಬಾ ಪಾಲುದಾರಿಕೆ ಇರುತ್ತದೆ. ಮುಂಬರುವ ತಿಂಗಳು ಮತ್ತು ವರ್ಷಗಳಲ್ಲಿ ನಮ್ಮ ಭದ್ರತೆ, ರಕ್ಷಣೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ನಾವು ಗಟ್ಟಿಗೊಳಿಸುವ ಕುರಿತು ನಾನು ಉತ್ಸುಕನಾಗಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಸೋಮವಾರ ರಿಷಿ ಸುನಕ್ ಬ್ರಿಟನ್​ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಏಷ್ಯಾದ ಮತ್ತು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್​ ಪ್ರಧಾನಿ ಹುದ್ದೆಗೇರಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಎನ್​ಐಎಗೆ ಹೆಚ್ಚಿನ ಅಧಿಕಾರ, ಸಿಆರ್​ಪಿಸಿ-ಐಪಿಸಿಗೆ ತಿದ್ದುಪಡಿ: ಅಮಿತ್​ ಶಾ ಮಹತ್ವದ ಘೋಷಣೆ

ABOUT THE AUTHOR

...view details