ನವದೆಹಲಿ:ಪ್ರತಿದಿನ ದೇಶಾದ್ಯಂತ ತೈಲ ಬೆಲೆ ಏರಿಕೆಯಾಗ್ತಿದ್ದು, ಇದರ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ 1973ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂಧನ ಬೆಲೆ ಏರಿಕೆ ವಿರುದ್ಧ ನಡೆಸಿದ್ದ ವಿಡಿಯೋವೊಂದನ್ನ ಇದೀಗ ಕಾಂಗ್ರೆಸ್ ಶೇರ್ ಮಾಡಿದೆ. ಈ ಮೂಲಕ ಆಡಳಿತ ಪಕ್ಷ ಬಿಜೆಪಿಗೆ ತಿರುಗೇಟು ನೀಡಿದೆ.
Petrol price Hike ವಿರುದ್ಧ 1973ರಲ್ಲಿ ವಾಜಪೇಯಿ ಪ್ರತಿಭಟನೆ... ವಿಡಿಯೋ ಶೇರ್ ಮಾಡಿದ Congress! - ಪೆಟ್ರೋಲ್ ಬೆಲೆ 7 ಪೈಸೆ ಏರಿಕೆ
1973ರಲ್ಲಿ ತೈಲ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಎತ್ತಿನ ಗಾಡಿ ಮೂಲಕ ಸಂಸತ್ಗೆ ಆಗಮಿಸಿದ್ದರು. ಅದರ ವಿಡಿಯೋ ತುಣಕವೊಂದನ್ನ ಇದೀಗ ಕಾಂಗ್ರೆಸ್ ಶೇರ್ ಮಾಡಿಕೊಂಡಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಶಿ ತರೂರ್ ಈ ವಿಡಿಯೋವನ್ನ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. 1973ರಲ್ಲಿ ವಿಪಕ್ಷ ಸ್ಥಾನದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ ಏಳು ಪೈಸೆ ಏರಿಕೆ ಮಾಡಿತ್ತು. ಹೀಗಾಗಿ ವಾಜಪೇಯಿ, ಎತ್ತಿನ ಗಾಡಿಯಲ್ಲಿ ಸಂಸತ್ಗೆ ಆಗಮಿಸಿದ್ದರು.
ವಿಡಿಯೋ ಶೇರ್ ಮಾಡಿಕೊಂಡಿರುವ ಶಶಿ ತರೂರ್,1973ರಲ್ಲಿ ಪೆಟ್ರೋಲ್ ಬೆಲೆ 7 ಪೈಸೆ ಏರಿಕೆ ಮಾಡಿದ್ದಾಗ ವಿರೋಧ ಪಕ್ಷ ಈ ರೀತಿಯಾಗಿ ಪ್ರತಿಭಟನೆ ನಡೆಸಿತ್ತು. ವಾಜಪೇಯಿ ಅವರು ಎತ್ತಿನ ಗಾಡಿ ಮೂಲಕ ಸಂಸತ್ಗೆ ಬಂದಿದ್ದರು. ಆದರೆ ಭದ್ರತಾ ನಿಬಂಧನೆಗಳಿರುವ ಕಾರಣ ಇದೀಗ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ದೇಶದ ಅನೇಕ ಪ್ರಮುಖ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಇದೇ ವಿಷಯವನ್ನಿಟ್ಟುಕೊಂಡು ಕೇಂದ್ರದ ವಿರುದ್ಧ ವಿಪಕ್ಷಗಳು ಆಕ್ರೋಶ ಹೊರಹಾಕುತ್ತಿವೆ.
TAGGED:
ಅಟಲ್ ಬಿಹಾರಿ ವಾಜಪೇಯಿ