ಕರ್ನಾಟಕ

karnataka

ETV Bharat / bharat

ಹಿಟ್​ ಅಂಡ್​​​ ರನ್​: ಪೊಲೀಸ್​ ಚೇಸಿಂಗ್​ ವೇಳೆ ಇಡ್ಲಿ ಬಂಡಿಗೆ ಡಿಕ್ಕಿ ಹೊಡೆದ ಚಾಲಕ - ಓರ್ವ ಸಾವು! - ಛತ್ತೀಸ್​ಗಡ್​ ಅಪರಾಧ ಸುದ್ದಿ

ಕುಡಿದ ಅಮಲಿನಲ್ಲಿ ಹಲವರಿಗೆ ಗುದ್ದಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ಚಾಲಕನನ್ನು ಪೊಲೀಸರು ಬೆನ್ನಟ್ಟಿದ್ದರು. ಈ ಚೇಸಿಂಗ್​ ಎದುರುಗಡೆಯಿಂದ ಬರುತ್ತಿದ್ದ ಇಡ್ಲಿ ಬಂಡಿಗೆ ಆರೋಪಿ ಚಾಲಕ ಡಿಕ್ಕಿ ಹೊಡೆದ ಘಟನೆ ಛತ್ತೀಸ್​ಗಢ​ದ ರಾಯಪುರದಲ್ಲಿ ನಡೆದಿದೆ.

Hit and run case in Raipur  West Raipur ASP Akash Rao Girepunje reaction  Deceased belongs to Uttar Pradesh  ರಾಯ್ಪುರ್​ದಲ್ಲಿ ಹಿಟ್​ ಆ್ಯಂಡ್​ ರನ್​ ಪ್ರಕರಣ  ಪಶ್ಚಿಮ ರಾಯ್ಪುರ್​ ಎಎಸ್ಪಿ ಆಕಾಶ್ ರಾವ್ ಗಿರೆಪುಂಜೆ ಹೇಳಿಕೆ  ಹಿಟ್​ ಆ್ಯಂಡ್​ ರನ್​ ಪ್ರಕರಣದಲ್ಲಿ ಉತ್ತರಪ್ರದೇಶದ ವ್ಯಕ್ತಿ ಸಾವು  ಛತ್ತೀಸ್​ಗಡ್​ ಅಪರಾಧ ಸುದ್ದಿ  Chhattisgarh crime news
ಪೊಲೀಸ್​ ಚೇಸಿಂಗ್​ ವೇಳೆ ಇಡ್ಲಿ ಬಂಡಿಗೆ ಡಿಕ್ಕಿ ಹೊಡೆದ ಆರೋಪಿ ಚಾಲಕ

By

Published : Mar 21, 2022, 11:57 AM IST

ರಾಯ್‌ಪುರ: ಕುಡಿದ ಅಮಲಿನಲ್ಲಿ ಚಾಲಕನೊಬ್ಬ ಹಲವರ ಮೇಲೆ ಕಾರು ಹಾಯಿಸಿ ಪರಾರಿಯಾಗುತ್ತಿದ್ದ. ಸುದ್ದಿ ತಿಳಿದ ಪೊಲೀಸರು ಚಾಲಕನ್ನ ಹಿಡಿಯಲು ಚೇಸಿಂಗ್​ ಮಾಡಿದ್ದರು. ಪೊಲೀಸರಿಂದ ಆರೋಪಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ಎದುರಿಗೆ ಬಂದ ಇಡ್ಲಿ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಛತ್ತೀಸ್​​ಗಢದ ರಾಯಪುರದಲ್ಲಿ ಈ ಘಟನೆ ನಗರದಲ್ಲಿ ನಡೆದಿದೆ.

ಪೊಲೀಸ್​ ಚೇಸಿಂಗ್​ ವೇಳೆ ಇಡ್ಲಿ ಬಂಡಿಗೆ ಡಿಕ್ಕಿ ಹೊಡೆದ ಆರೋಪಿ ಚಾಲಕ

ಪೊಲೀಸರು ಹೇಳಿದ್ದೇನು?:ಆರೋಪಿದೇವರಾಜ್ ಪಾಲ್ ಕುಡಿದು CG-MA-2200 ಡಬ್ಲ್ಯುಆರ್‌ವಿ ಕಾರು ಚಲಾಯಿಸುತ್ತಿದ್ದ. ಆರೋಪಿ ಚಾಲಕ ರ‍್ಯಾಷ್​ ಆಗಿ ಕಾರು ಚಲಾಯಿಸಿಕೊಂಡು ಬುಧಾ ತಾಲಾಬ್ ಕಡೆಗೆ ಹೋಗುತ್ತಿದ್ದಾಗ ಭತಗಾಂವ್ ಬಸ್ ನಿಲ್ದಾಣದ ಬಳಿ ಹಲವಾರು ವಾಹನಗಳು ಸೇರಿದಂತೆ 6 ಕ್ಕೂ ಹೆಚ್ಚು ಜನರಿಗೆ ಗುದ್ದಿದ್ದಾನೆ.

ಓದಿ:ಶಾಲಾ ಆವರಣದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರು ಚಾಲಕನನ್ನು ಬೆನ್ನಟ್ಟಿದ್ದಾರೆ. ಇದೇ ವೇಳೆ, ಕಾರು ಚಾಲಕ ಎದುರುಗಡೆಯಿಂದ ಬರುತ್ತಿದ್ದ ಇಡ್ಲಿ ಬಂಡಿಗೆ ತನ್ನ ಕಾರಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಆ ಅಂಗಡಿ ಮಾಲೀಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ವ್ಯಾಪಾರಿಯನ್ನ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಲಕ್ಷ್ಮೀಕಾಂತ್ ಜಾತವ್ ಎಂದು ಗುರುತಿಸಲಾಗಿದೆ. ಈ ನಡುವೆ ಕಾರು ಗುದ್ದಿದ ರಭಸಕ್ಕೆ ರಸ್ತೆ ತುಂಬೆಲ್ಲಾ ಇಡ್ಲಿಗಳು ಚೆಲ್ಲಾಪಿಲ್ಲಾಗಿ ಬಿದ್ದಿದ್ದವು. ಇಡ್ಲಿ ಬಂಡಿಗೆ ಡಿಕ್ಕಿ ಹೊಡೆದ ಚಾಲಕ ಮುಂದೆ ಹೋಗಿ ಬುಧಾಪರ ಕೊಳದ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಆರೋಪಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ದೇವರಾಜ್ ಪಾಲ್ ತೇಲಿಬಂದ್​ ನಿವಾಸಿ. ಕಳೆದ ಏಳೆಂಟು ವರ್ಷಗಳಿಂದ ರಾಯ್ಪುರದಲ್ಲಿ ಮಠಪಾರಾದ ಬಜರಂಗ ಚೌಕ್ ಬಳಿ ತನ್ನ ಸಹಚರರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ ಎಂದು ಪಶ್ಚಿಮ ರಾಯ್ಪುರ್​ ಎಎಸ್ಪಿ ಆಕಾಶ್ ರಾವ್ ಗಿರೆಪುಂಜೆ ಮಾಹಿತಿ ನೀಡಿದ್ದಾರೆ.

ಓದಿ:ವೀರಶೈವ ಸಂಪ್ರದಾಯದಂತೆ ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ: ಸಂಬಂಧಿಕರ ಆಕ್ರಂದನ

ಗಾಯಾಳು ಶಿವಂ ಮಾತನಾಡಿ, ನಾವು ಊಟ ಮುಗಿಸಿ ವಾಕಿಂಗ್ ಹೋಗಿತ್ತಿದ್ದೆವು. ಅಷ್ಟರಲ್ಲಿ ಎದುರಿನಿಂದ ವೇಗವಾಗಿ ಬಂದ ಬಿಳಿ ಬಣ್ಣದ ಕಾರು ನನಗೆ ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ನನ್ನ ಕೈ ಮೂಳೆ ಮುರಿತವಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಈ ಘಟನೆ ಕುರಿತು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಆರೋಪಿಯ ಕಾರು ಚಾಲನೆ ಭಯ ಮೂಡಿಸುವಂತಿದೆ. ಇನ್ನು ಆರೋಪಿ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details