ಚೆನ್ನೈ(ತಮಿಳುನಾಡು): ಹಿಂದೂ ಧಾರ್ಮಿಕ ದತ್ತಿ ವಿಭಾಗದಡಿ ಬರುವ ದೇವಾಲಯಗಳಲ್ಲಿ ಮಹಿಳೆಯರು ತರಬೇತಿ ಪಡೆದ ನಂತರ ಅವರನ್ನು ಅರ್ಚಕಿಯರನ್ನಾಗಿ ನೇಮಿಸಲಾಗುತ್ತದೆ ಎಂದು ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ.ಶೇಖರ್ ಬಾಬು ಹೇಳಿದ್ದಾರೆ. ಸಚಿವ ಪಿ.ಕೆ.ಶೇಖರ್ ಇಂದು ನುಂಗಂಬಕ್ಕಂನಲ್ಲಿರುವ ಪ್ರಧಾನ ಕಚೇರಿಯಲ್ಲಿ ಮಾನವ ಸಂಪನ್ಮೂಲ ಮತ್ತು ಸಿಇ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಬಳಿಕ ಈ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ.
ಸಭೆಯ ನಂತರ ಅವರು ಮಾತನಾಡುತ್ತಾ, ಮಹಿಳೆಯರನ್ನು ಅರ್ಚಕಿಯರನ್ನಾಗಿ ನೇಮಿಸಲು ಅಗತ್ಯ ಕ್ರಮಗಳು ಜಾರಿಯಲ್ಲಿವೆ. ಅರ್ಚಕರ ಹುದ್ದೆಗೆ ನೇಮಿಸುವ ಮೊದಲು ಅಂಥ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಲಾಗುವುದು. ‘ಎಲ್ಲ ಜಾತಿಗಳ ಪುರೋಹಿತರು’ ಎಂಬ ಯೋಜನೆ ನೂರು ದಿನಗಳಲ್ಲಿ ಜಾರಿಗೆ ಬರಲಿದೆ.