ಶ್ರೀನಗರ(ಜಮ್ಮು-ಕಾಶ್ಮೀರ): ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗಿದ್ದು, ಇದರ ಮಧ್ಯೆ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಲಾಲ್ಚೌಕ್ ಪ್ರದೇಶದ ಗಡಿಯಾರ ಗೋಪುರದಲ್ಲಿ ಸ್ವತಂತ್ರ ಭಾರತದ ನಂತರ ಇದೇ ಮೊದಲ ಸಲ ತ್ರಿವರ್ಣ ಧ್ವಜ ಹಾರಿದೆ.
73ನೇ ಗಣರಾಜ್ಯೋತ್ಸವದ ಅಂಗವಾಗಿ ಲಾಲ್ ಚೌಕ್ ಪ್ರದೇಶದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಕಾಶ್ಮೀರಿ ಸ್ಥಳೀಯರು ಅಲ್ಲಿನ ಆಡಳಿತದೊಂದಿಗೆ ಬೃಹತ್ ರಾಷ್ಟ್ರಧ್ವಜ ಆರೋಹಣ ಮಾಡಿದರು. ಹೀಗಾಗಿ ಸಾಕಷ್ಟು ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಕಳೆದ 30 ವರ್ಷಗಳ ಹಿಂದೆ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರು 30 ವರ್ಷಗಳ ಹಿಂದೆ ಈ ಸ್ಥಳದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರು. ಆದರೆ, ಮಿಲಿಟರಿ ಪಡೆಯ ಸರ್ಪಗಾವಲಿನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ವೇಳೆ ನರೇಂದ್ರ ಮೋದಿ ಸಹ ತೆರಳಿದ್ದರು.