ಕರ್ನಾಟಕ

karnataka

ದೇಶದಲ್ಲೇ ಪ್ರಥಮ: ಚಾಕೋಲೆಟ್​, ನೂಡಲ್ಸ್ ಸಾಗಾಟಕ್ಕೆ ಎಸಿ ಬೋಗಿ ಬಳಸಿದ ಭಾರತೀಯ ರೈಲ್ವೆ

By

Published : Oct 10, 2021, 10:46 AM IST

ಚಾಕೊಲೇಟ್‌ಗಳು ಮತ್ತು ನೂಡಲ್ಸ್‌ ಸಾಗಿಸಲು ಕಡಿಮೆ ಮತ್ತು ನಿಯಂತ್ರಿತ ತಾಪಮಾನ ಅಗತ್ಯವಿದ್ದ ಕಾರಣದಿಂದ ನಿಷ್ಕ್ರಿಯವಾಗಿದ್ದ ಹವಾನಿಯಂತ್ರಿತ ಬೋಗಿಗಳನ್ನು ಮಾರ್ಪಾಡು ಮಾಡಿ, ಆಹಾರೋತ್ಪನ್ನಗಳನ್ನು ಸಾಗಾಟ ಮಾಡಲು ಬಳಸಿಕೊಳ್ಳಲಾಗುತ್ತಿದೆ.

In a first, Indian Railways transports chocolates in AC coaches
ದೇಶದಲ್ಲೇ ಪ್ರಥಮ: ಚಾಕೋಲೆಟ್​ ಮತ್ತು ನೂಡಲ್ಸ್​ಗಳ ಎಸಿ ಬೋಗಿ ಬಳಸಿದ ಭಾರತೀಯ ರೈಲ್ವೆ

ಹುಬ್ಬಳ್ಳಿ: ದೇಶದಲ್ಲೇ ಪ್ರಪ್ರಥಮ ಬಾರಿಗೆ ಭಾರತೀಯ ರೈಲ್ವೆಯು ಚಾಕೊಲೇಟ್‌ಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಸಾಗಿಸಲು ಹವಾನಿಯಂತ್ರಿತ ಬೋಗಿಗಳನ್ನು ಬಳಸುತ್ತಿದೆ ನೈರುತ್ಯ ರೈಲ್ವೆ ವಿಭಾಗ ತಿಳಿಸಿದೆ.

ಅಕ್ಟೋಬರ್ 8ರಂದು ಗೋವಾದ ವಾಸ್ಕೋ ಡ ಗಾಮಾ ರೈಲ್ವೆ ನಿಲ್ದಾಣದಿಂದ ದೆಹಲಿಯ ಓಖ್ಲಾ ರೈಲ್ವೆ ನಿಲ್ದಾಣದವರೆಗೆ 18 ಹವಾನಿಯಂತ್ರಿತ ಕೋಚ್‌ಗಳಲ್ಲಿ ಸುಮಾರು 163 ಟನ್ ತೂಕದ ಚಾಕೊಲೇಟ್‌ಗಳು ಮತ್ತು ನೂಡಲ್ಸ್‌ ಪೊಟ್ಟಣಗಳನ್ನು ಸಾಗಿಸಲಾಗಿದೆ.

ಈ ಚಾಕೊಲೇಟ್‌ಗಳು ಮತ್ತು ನೂಡಲ್ಸ್‌ ಸಾಗಿಸಲು ಕಡಿಮೆ ಮತ್ತು ನಿಯಂತ್ರಿತ ತಾಪಮಾನ ಅಗತ್ಯವಿದ್ದು ನಿಷ್ಕ್ರಿಯವಾಗಿದ್ದ ಹವಾನಿಯಂತ್ರಿತ ಬೋಗಿಗಳನ್ನು ಮಾರ್ಪಡಿಸಿ, ಆಹಾರೋತ್ಪನ್ನಗಳನ್ನು ಸಾಗಾಟ ಮಾಡಲಾಗಿದೆ.

ಎವಿಜಿ ಲಾಜಿಸ್ಟಿಕ್ಸ್​ಗೆ ಸೇರಿದ ಸರಕು ಇದಾಗಿದ್ದು, ರೈಲ್ವೆಗೆ 12.83 ಲಕ್ಷ ಆದಾಯ ತಂದುಕೊಟ್ಟಿದೆ. ಹುಬ್ಬಳ್ಳಿ ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕದ (BDU) ಹೊಸ ಮಾರ್ಕೆಟಿಂಗ್ ಪ್ರಯತ್ನ ಮಾಡಿದೆ ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ. BDUನ ಪ್ರಯತ್ನಗಳನ್ನು ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲ್ಖೇಡೆ ಅಭಿನಂದಿಸಿದ್ದಾರೆ.

ಸರಕು ಸಾಗಣೆ ಮಾಡುವುದರಿಂದ ಹುಬ್ಬಳ್ಳಿ ವಿಭಾಗದಲ್ಲಿ ಅಕ್ಟೋಬರ್ 2020ರಿಂದ 1 ಕೋಟಿ ರೂಪಾಯಿ ಗಳಿಸಲಾಗಿದೆ. ಸೆಪ್ಟೆಂಬರ್ 2021ರಲ್ಲಿ ಇದೇ ವಿಭಾಗದಲ್ಲಿ 1.58 ಕೋಟಿ ರೂಪಾಯಿ ಗಳಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2021ರ ಸೆಪ್ಟೆಂಬರ್​ವರೆಗೆ ಸರಕು ಸಾಗಣೆಯಿಂದಾಗಿ 11.17 ಕೋಟಿ ರೂಪಾಯಿಗಳನ್ನು ಗಳಿಸಲಾಗಿದೆ ಎಂದು ರೈಲ್ವೆ ಇಲಾಖೆ ವರದಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ:ಹಬ್ಬದ ಸಂಭ್ರಮದ ಮಧ್ಯೆ ಉಗ್ರರ ದಾಳಿಯ ಎಚ್ಚರಿಕೆ: ರಾಷ್ಟ್ರ ರಾಜಧಾನಿಯಲ್ಲಿ ಕಟ್ಟೆಚ್ಚರ

ABOUT THE AUTHOR

...view details