ಇಸ್ಲಾಮಾಬಾದ್:73 ವರ್ಷಗಳ ನಂತರ ಹಿಂದೂ ಧರ್ಮೀಯ ಯುವತಿ ಸನಾ ರಾಮಚಂದ್ ಪಾಕಿಸ್ತಾನದಲ್ಲಿ ಪ್ರತಿಷ್ಠಿತ ಪರೀಕ್ಷೆ ಎಂದು ಪರಿಗಣಿಸಲಾದ ಕೇಂದ್ರಿಯ ಸುಪೀರಿಯರ್ ಸರ್ವೀಸಸ್ (ಸಿಎಸ್ಎಸ್) ಅನ್ನು ತೇರ್ಗಡೆ ಹೊಂದಿ ಗಮನ ಸೆಳೆದಿದ್ದಾರೆ. ಈ ಮೂಲಕ ಕಠಿಣ ಪರೀಕ್ಷೆ ಪಾಸ್ ಮಾಡಿರುವ ಪಾಕಿಸ್ತಾನದ ಮೊದಲ ಹಿಂದೂ ಯುವತಿ ಎಂಬ ಸಾಧನೆ ಮಾಡಿದರು.
ಪಾಕಿಸ್ತಾನದಲ್ಲಿ ನಡೆಯುವ ಸಿಎಸ್ಎಸ್ ಪರೀಕ್ಷೆ ಸರ್ಕಾರದ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸುವ ವಿಚಾರದಲ್ಲಿ ಭಾರತದಲ್ಲಿ ನಡೆಯುವ ಸಿವಿಲ್ ಸರ್ವಿಸ್ ಪರೀಕ್ಷೆಗೆ ಸರಿಸಮಾನವಾಗಿದೆ. ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್ ಮಾಡಿರುವ ಸನಾ ರಾಮಚಂದ್, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶಿಕರ್ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದ ನಿವಾಸಿ.