ಹರಿಯಾಣ :ಇದೇ ಮೊದಲ ಬಾರಿಗೆ ಹರಿಯಾಣದ ಕರ್ನಲ್ ಜಿಲ್ಲೆಯಲ್ಲಿ ಡ್ರೋನ್ಗಳ ಸಹಾಯದಿಂದ ಬೆಳೆಗಳಿಗೆ ರಸಗೊಬ್ಬರವನ್ನು ಸಿಂಪಡಣೆ ಮಾಡಲಾಗಿದೆ. ಡ್ರೋನ್ ಮೂಲಕ ಔಷಧ ಸಿಂಪಡಣೆ ಮಾಡಲಾಗುತ್ತಿತ್ತು. ಈಗ ರಸಗೊಬ್ಬರವನ್ನೂ ಬೆಳೆಗಳಿಗೆ ಡ್ರೋನ್ ಮೂಲಕ ನೀಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ(IFFCO) ಸಹಯೋಗದಲ್ಲಿ ಹರಿಯಾಣದ ಕರ್ನಲ್ ಜಿಲ್ಲೆಯಲ್ಲಿ ಫಾರ್ಮ್‌ಗಳಲ್ಲಿ ಬೆಳೆಯಲಾದ ಆಲೂಗಡ್ಡೆ ಬೆಳೆಯ ಮೇಲೆ ಈ ಪ್ರಯೋಗ ನಡೆಸಲಾಗಿದೆ. ಇದರಲ್ಲಿ ಉತ್ತಮ ಫಲಿತಾಂಶ ಕೂಡ ಕಂಡು ಬಂದಿದೆ.
ಡ್ರೋನ್ ಮೂಲಕ ಒಂದು ಎಕರೆ ಜಮೀನಿಗೆ 10 ನಿಮಿಷದಲ್ಲಿ ರಸಗೊಬ್ಬರ ಸಿಂಪಡಣೆ ಮಾಡಬಹುದಾಗಿದೆ. ರಸಗೊಬ್ಬರವನ್ನು ನೀರಿನ ಮೂಲಕ ನೀಡುವುದರಿಂದ ಬೇರುಗಳವರೆಗೆ ನೇರವಾಗಿ, ಶೀಘ್ರವಾಗಿ ತಲುಪಲು ಸಹಕಾರಿಯಾಗಿದೆ. ಇದು ಸಾಂಪ್ರದಾಯಿಕ ಸಿಂಪಡಣೆಗೆ ಹೋಲಿಸಿದರೆ ಕಡಿಮೆ ನೀರು ಖರ್ಚಾಗುತ್ತದೆ.
ಡ್ರೋನ್ ಒಂದು ಬಾರಿ 10 ಲೀಟರ್ ನೀರನ್ನು ಹೊತ್ತೊಯ್ಯಬಲ್ಲದು. ಅದು ಖಾಲಿಯಾದ ಬಳಿಕ ಮರುಪೂರಣಕ್ಕಾಗಿ ನಿಗದಿತ ಸ್ಥಳಕ್ಕೆ ಬಂದು ಟ್ಯಾಂಕ್ ತುಂಬಿಸಿಕೊಳ್ಳುತ್ತದೆ.
ಮುಂದುವರಿದು ನಿಂತ ಸ್ಥಳದಿಂದ ಮತ್ತೆ ಸಿಂಪಡಣೆ ಆರಂಭಿಸುತ್ತದೆ. ಈ ಹೊಸ ಪ್ರಯೋಗದಿಂದ ರೈತರಿಗೆ ಔಷಧ ಮತ್ತು ರಸಗೊಬ್ಬರ ಸಿಂಪಡಣೆಯು ಸುಲಭವಾಗಲಿದೆ. ಮತ್ತು ಉತ್ರ್ಕಷ್ಟ ಬೆಳೆಯನ್ನು ಪಡೆಯಬಹುದಾಗಿದೆ.