ನವದೆಹಲಿ:ವಿಮಾನದ ಒಳಗಡೆ ಸ್ವಚ್ಛಗೊಳಿಸಲು ಹಾಗೂ ಸೋಂಕು ರಹಿತಗೊಳಿಸಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಭಾರತದಲ್ಲಿ ಮೊದಲ ಬಾರಿಗೆ ರೊಬೊಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.
ವಿಮಾನ ಸ್ವಚ್ಛತೆಗೆ ಮೊಟ್ಟಮೊದಲ ಬಾರಿಗೆ ರೊಬೋಟ್ ಬಳಕೆ ಯುವಿ ಸೋಂಕು ನಿವಾರಕ ಲ್ಯಾಂಪಿಂಗ್ ವ್ಯವಸ್ಥೆಯನ್ನು ಅಳವಡಿಸಿರುವ ಯುವಿ ರೊಬೊಟ್ ಅನ್ನು ಗುರುವಾರ ಮೊದಲ ಬಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಬೋಯಿಂಗ್ 737-800 ವಿಮಾನಗಳನ್ನು ಸೋಂಕು ರಹಿತಗೊಳಿಸಲು ಬಳಸಿಕೊಂಡಿದೆ.
ಇದನ್ನೂ ಓದಿ:ಕೊರೊನಾ ವ್ಯಾಕ್ಸಿನ್ ಸಾಗಾಟ: ಕೇಂದ್ರ ತಂಡದಿಂದ ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚೆ
ವಿಮಾನದ ಆಸನಗಳು, ಆಸನಗಳ ಕೆಳಗೆ, ಲಗೇಜು ಇಡುವ ಸ್ಥಳ, ಕಿಟಕಿ, ಕಾಕ್ಪಿಟ್ ಪ್ರದೇಶ, ಸ್ವಿಚ್ ಪ್ಯಾನೆಲ್ಗಳು ಮುಂತಾದ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಹಾಗೂ ಸೋಂಕು ನಿವಾರಕಗೊಳಿಸಲು ಈ ರೋಬೋಟ್ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಸಿಬ್ಬಂದಿ ಸ್ವಚ್ಚಗೊಳಿಸಲು ಕಷ್ಟಕರವಾದ ವಿಮಾನದ ಭಾಗಗಳನ್ನು ಇದು ಸುಲಲಿತಬಾಗಿ ಸ್ವಚ್ಚ ಮಾಡಲಿದೆ.
ಸದ್ಯಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೇರೆ ಬೇರೆ ವಿಮಾನ ನಿಲ್ದಾಣಗಳಲ್ಲಿರುವ ತನ್ನ ಸಂಸ್ಥೆಯ ವಿಮಾನಗಳಲ್ಲೂ ಕೂಡಾ ಈ ರೋಬೋಟ್ ಅಳವಡಿಸಲು ಮುಂದಾಗಿದೆ. ಈ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮತ್ತಷ್ಟು ಸುರಕ್ಷತೆ ಒದಗಿಸಲಿದೆ.