ಧರ್ಮಪುರಿ (ತಮಿಳುನಾಡು): ಡಿಜಿಟಲ್ ಇಂಡಿಯಾದ ಅಡಿಯಲ್ಲಿ ಉತ್ತರ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಒಟ್ಟು 62 ಹಳ್ಳಿಗಳಲ್ಲಿ ದೂರಸಂಪರ್ಕ ಸೇವೆಯನ್ನು ಕಲ್ಪಿಸಲು ಮೊಬೈಲ್ ಟವರ್ನ್ನು ಸ್ಥಾಪಿಸಲಾಯಿತು. ಈ ಮೂಲಕ ಚುನಾವಣಾ ಸಂದರ್ಭ ನೀಡಿದ ಭರವಸೆಯನ್ನು ಧರ್ಮಪುರಿ ಸಂಸದ ಎಸ್ ಸೆಂಥಿಲ್‌ಕುಮಾರ್ ನೆರವೇರಿಸಿದ್ದಾರೆ.
ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ 93.3 ಪ್ರತಿಶತ ಭಾರತೀಯ ಕುಟುಂಬಗಳು ಮೊಬೈಲ್ ಫೋನ್ಗಳನ್ನು ಹೊಂದಿವೆ. ಪ್ರತಿ ಹತ್ತು ಜನರಲ್ಲಿ ಒಂಬತ್ತಕ್ಕಿಂತ ಹೆಚ್ಚು ಜನರು ಮೊಬೈಲ್ ಫೋನ್ ಹೊಂದಿದ್ದಾರೆ ಎಂದು ದತ್ತಾಂಶ ಸೂಚಿಸುತ್ತದೆ. ಆದರೂ, ಈ ಗ್ರಾಮಗಳ ಯಾವುದೇ ಕುಟುಂಬದ ಸದಸ್ಯರು ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಕನಿಷ್ಠ 10 ಕಿಮೀ ದೂರ ಕ್ರಮಿಸಬೇಕಾದ ಅನಿವಾರ್ಯ ಇತ್ತು. ಮತ್ತು ನಿಗದಿತ ಸಮಯದಲ್ಲಿ ಸಿಗ್ನಲ್ ಸಿಗುವಂತೆ ಇತ್ತು.
ಈ ಟವರ್ನ್ನು ಧರ್ಮಪುರಿ ಜಿಲ್ಲಾಧಿಕಾರಿ ಕೆ.ಸಾಂತಿ ಅವರು ಸಂಸದ ಎಸ್ ಸೆಂಥಿಲ್‌ಕುಮಾರ್ ಸಮ್ಮುಖದಲ್ಲಿ ಉದ್ಘಾಟಿಸಿದರು. ಸದ್ಯ ಅಳವಡಿಸಿರುವ ಮೊಬೈಲ್ ಟವರ್ ಹರೂರು ತಾಲೂಕಿನ ಸಿತೇರಿ ಪಂಚಾಯತ್ ವ್ಯಾಪ್ತಿಯ ಗುಡ್ಡಗಾಡು ಗ್ರಾಮಗಳಿಗೆ ಸೇವೆ ಒದಗಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, 62 ಗ್ರಾಮಗಳ ಜನರಿಗೆ ದೂರಸಂಪರ್ಕಕ್ಕೆ ಅವಕಾಶ ಕಲ್ಪಿಸಿಕೊಟ್ಟ ಸಂಸದರ ಕಾರ್ಯವನ್ನು ಶ್ಲಾಘಿಸಿದರು. ಪಂಚಾಯಿತಿ ವ್ಯಾಪ್ತಿಯ ಎಲ್ಲ 62 ಗ್ರಾಮಗಳಿಗೆರಸ್ತೆ ಸಂಪರ್ಕ ಕಲ್ಪಿಸಲು ಮನವಿ ಮಾಡಲಾಗುವುದು ಇದೇ ವೇಳೆ ಹೇಳಿದರು.
ಇನ್ನು ಈ ಗ್ರಾಮಗಳ ದೀರ್ಘಕಾಲಿಕ ಮೊಬೈಲ್ ಸಂಪರ್ಕ ಸಮಸ್ಯೆಯನ್ನು ಪರಿಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದ ಸೆಂಥಿಲ್ ಕುಮಾರ್, ಸಂಸತ್ತಿನಲ್ಲಿ ಎರಡು ಬಾರಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ, ಇವರ ಬೇಡಿಕೆ ತಿರಸ್ಕರಿಸಲ್ಪಟ್ಟಾಗ ಸೆಂಥಿಲ್‌ಕುಮಾರ್ ಜಿಯೋವನ್ನು ಸಂಸ್ಥೆಯನ್ನು ಸಂಪರ್ಕಿಸಿ ಟವರ್ ಸ್ಥಾಪಿಸಲು ಕೇಳಿಕೊಂಡರು. ಬಳಿಕ ಸ್ಥಳೀಯ ಕಾರ್ಮಿಕರ ಸಹಾಯದಿಂದ ಟವರ್ ನಿರ್ಮಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಯಿತು.
ಇದನ್ನೂ ಓದಿ :ರೆಡ್ಲೈಟ್ ಏರಿಯಾದಲ್ಲಿ ಹುಟ್ಟಿ ಬೆಳೆದ ಮಹಿಳೆಗೆ ಮಾನವ ಹಕ್ಕುಗಳ ಆಯೋಗದ ಸಲಹಾ ಗುಂಪಿನಲ್ಲಿ ಸ್ಥಾನ