ಕರ್ನಾಟಕ

karnataka

ETV Bharat / bharat

ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶ: ಮಂತ್ರಿಗಳನ್ನು ಎಂಟು ಗುಂಪುಗಳಾಗಿ ವಿಂಗಡಿಸಿ ಕೆಲಸ ಹಚ್ಚಿದ ಮೋದಿ - ಮೋದಿ ಸರ್ಕಾರ

ಮಂತ್ರಿಗಳನ್ನು ಎಂಟು ಗುಂಪುಗಳಾಗಿ ವಿಭಜಿಸಿ ಆಡಳಿತ ಸುಧಾರಣೆಗೆ ಮೇಲ್ವಿಚಾರಣೆಗೆ ಹಚ್ಚಿಸುವ ಕಸರತ್ತಿಗೆ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಚಿಂತನ ಸಭೆಯ ತೀರ್ಮಾನ ಕೈಗೊಂಡಿದೆ.

ಮಂತ್ರಿಗಳನ್ನು ಎಂಟು ಗುಂಪುಗಳಾಗಿ ವಿಂಗಡಿಸಿದ ಮೋದಿ
ಮಂತ್ರಿಗಳನ್ನು ಎಂಟು ಗುಂಪುಗಳಾಗಿ ವಿಂಗಡಿಸಿದ ಮೋದಿ

By

Published : Nov 15, 2021, 12:17 PM IST

ನವದೆಹಲಿ: ಆಡಳಿತದಲ್ಲಿ ಸುಧಾರಣೆ ತರುವ ಪ್ರಯತ್ನದಲ್ಲಿ ಮೋದಿ ಸರ್ಕಾರ(Modi government) ಯುವ ವೃತ್ತಿಪರರನ್ನು ತಮ್ಮತ್ತ ಸೆಳೆಯಲು ಯೋಜಿಸುತ್ತಿದೆ. ಈ ಸಂಬಂಧ ನಿವೃತ್ತ ಅಧಿಕಾರಿಗಳಿಂದ ಸಲಹೆಗಳನ್ನು ಪಡೆಯಲು ಮತ್ತು ಯೋಜನೆ ಮೇಲ್ವಿಚಾರಣೆಗಾಗಿ ತಂತ್ರಜ್ಞಾನದ ಅತ್ಯುತ್ತಮ ಬಳಕೆ ಮಾಡಲು ಮುಂದಾಗಿದೆ ಹಾಗೆ ಎಂಟು ವಿಭಿನ್ನ ಗುಂಪುಗಳನ್ನು ಮಾಡಿ, ಹಲವಾರು ಇತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು 77 ಮಂತ್ರಿಗಳನ್ನು ಎಂಟು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವರ ತಂಡಗಳಲ್ಲಿ ನೇಮಕಾತಿಗಾಗಿ ವೃತ್ತಿಪರರ ಪೂಲ್ ಅನ್ನು ರಚಿಸಲಾಗಿದೆ ಹಾಗೆ ಪಾರದರ್ಶಕತೆಯನ್ನು ತರಲು ಮತ್ತು ಸರ್ಕಾರದ ದಕ್ಷತೆಯನ್ನು ಹೆಚ್ಚಿಸಲು ಎಲ್ಲ ಸಚಿವರ ಕಚೇರಿಗಳಲ್ಲಿ ಬೇಕಾದ ಇತರ ರೀತಿಯ ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಂಟು ಗುಂಪುಗಳಾದ ಮಂತ್ರಿಗಳು:

ಮಂತ್ರಿಗಳನ್ನು ಎಂಟು ಗುಂಪುಗಳಾಗಿ ವಿಭಜಿಸುವ ಈ ಕಸರತ್ತು ಪ್ರಧಾನಿ ನರೇಂದ್ರ ಮೋದಿ ಅವರ (Prime Minister Narendra Modi) ಅಧ್ಯಕ್ಷತೆಯಲ್ಲಿ ನಡೆದ ಚಿಂತನ ಸಭೆಯ ನಂತರ ತೀರ್ಮಾನವಾಯಿತು. ಸಭೆಯು ಸುಮಾರು ಐದು ಗಂಟೆಗಳ ಕಾಲ ನಡೆಯಿತು. ಅಂತಹ ಒಟ್ಟು ಐದು ಅಧಿವೇಶನಗಳನ್ನು ಮೋದಿ ನಡೆಸಿದರು. ಪ್ರತಿಯೊಂದೂ ಕೂಡ ವೈಯಕ್ತಿಕ ದಕ್ಷತೆ, ಕೇಂದ್ರೀಕೃತ ಅನುಷ್ಠಾನ, ಸಚಿವಾಲಯದ ಕಾರ್ಯ ನಿರ್ವಹಣೆ ಮತ್ತು ಮಧ್ಯಸ್ಥಗಾರರ ತೊಡಗಿಸಿಕೊಳ್ಳುವಿಕೆ, ಪಕ್ಷದ ಸಮನ್ವಯ ಮತ್ತು ಪರಿಣಾಮಕಾರಿ ಸಂವಹನ ಮತ್ತು ಸಂಸದೀಯ ಆಚರಣೆಗಳ ಮೇಲೆ ನಿಂತಿತ್ತು.

ಕೊನೆಯ ಚಿಂತನ - ಮಂಥನ (brainstorming ) ಸಭೆಯಲ್ಲಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಕೂಡ ಭಾಗವಹಿಸಿದ್ದರು.ಈ ಎಲ್ಲ ಸಭೆಗಳು ಪ್ರಧಾನವಾಗಿ ಮೋದಿ ಸರ್ಕಾರದ ದಕ್ಷತೆ ಮತ್ತು ವಿತರಣಾ ವ್ಯವಸ್ಥೆಯನ್ನು ಸುಧಾರಿಸುವತ್ತ ಗಮನಹರಿಸಿದವು.

ಕೌನ್ಸಿಲ್‌ನಲ್ಲಿರುವ ಎಲ್ಲ 77 ಮಂತ್ರಿಗಳು ಈ ಎಂಟು ಗುಂಪುಗಳ ಭಾಗವಾಗಿದ್ದಾರೆ. ಪ್ರತಿಯೊಂದೂ ಗುಂಪು ಒಂಬತ್ತರಿಂದ ಹತ್ತು ಸಚಿವರನ್ನು ಒಳಗೊಂಡಿದ್ದು, ಒಬ್ಬ ಕೇಂದ್ರ ಸಚಿವರನ್ನು ಗುಂಪು ಸಂಯೋಜಕರಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಓದಿ: ಮತ್ತೆ ಆತಂಕ.. ನ್ಯೂಜಿಲ್ಯಾಂಡ್​​​ನಲ್ಲಿ ಡೆಲ್ಟಾ ರೂಪಾಂತರದ 173 ಹೊಸ ಪ್ರಕರಣಗಳು ಪತ್ತೆ

ನಿಯೋಜಿಸಲಾದ ಕಾರ್ಯಗಳು:

ಪ್ರತಿ ಸಚಿವರ ಕಚೇರಿಯಲ್ಲಿ ಕೇಂದ್ರದ ಪ್ರಮುಖ ಯೋಜನೆಗಳು ಮತ್ತು ನೀತಿಗಳ ಕಾರ್ಯಕ್ಷಮತೆಯ ಬಗ್ಗೆ ನವೀಕರಣಗಳನ್ನು ನೀಡುವ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುವುದು, ಆಯಾ ಸಚಿವರು ಮಾಡಿದ ನಿರ್ಧಾರಗಳನ್ನು ಮೇಲ್ವಿಚಾರಣೆ ಮಾಡಲು ಡ್ಯಾಶ್‌ಬೋರ್ಡ್ ಮತ್ತು ಸಭೆಗಳನ್ನು ನಿಗದಿಪಡಿಸುವ ವ್ಯವಸ್ಥೆ ಮತ್ತು ಪತ್ರ ವ್ಯವಹಾರವನ್ನು ನಿರ್ವಹಿಸುವುದು ಈ ಗುಂಪುಗಳಿಗೆ ನಿಯೋಜಿಸಲಾದ ಕಾರ್ಯಗಳಲ್ಲಿ ಪ್ರಮುಖವಾದವು.

ಸಂವಹನ ಮತ್ತು ಇತರ ಪ್ರಮುಖ ಕ್ಷೇತ್ರಗಳ ಮೇಲೆ ಕಮಾಂಡ್ ಹೊಂದಿರುವ ಕನಿಷ್ಠ ಮೂವರು ಯುವ ವೃತ್ತಿಪರರ ತಂಡವನ್ನು ರಚಿಸುವ ಕಾರ್ಯವಿಧಾನವನ್ನು ಸ್ಥಾಪಿಸಲು ಇರುವ ಗುಂಪುಗಳಲ್ಲಿ ಒಂದು ಗುಂಪನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ, ನಿವೃತ್ತಿಯಾಗುವ ನೌಕರರ ಪ್ರತಿಕ್ರಿಯೆ ಮತ್ತು ಅನುಭವಗಳನ್ನು ನಿರ್ವಹಿಸುವ ಪೋರ್ಟಲ್ ರಚಿಸಲು ಗುಂಪು ನಿಯೋಜಿಸಲಾಗಿದೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ನರೇಂದ್ರ ಸಿಂಗ್ ತೋಮರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಆಯಾ ಗುಂಪುಗಳ ಸಂಯೋಜಕರಾಗಿದ್ದಾರೆ.

ತಮ್ಮ ಕಚೇರಿಯ ಉತ್ತಮ ಕಾರ್ಯಗಳನ್ನು ಇತರ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಚಿಂತನ ಶಿಬಿರದಲ್ಲಿ ಪ್ರಸ್ತುತಿಗಳನ್ನು ನೀಡಿದ ಹೆಚ್ಚಿನ ಮಂತ್ರಿಗಳಿಗೆ ತಮ್ಮ ತಮ್ಮ ಗುಂಪುಗಳನ್ನು ಸಂಯೋಜಿಸುವ ಜವಾಬ್ದಾರಿಯನ್ನು ನೀಡಲಾಗಿದೆ.

For All Latest Updates

ABOUT THE AUTHOR

...view details