ಲಖನೌ(ಉತ್ತರ ಪ್ರದೇಶ):ದೇಶದಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ಘೋಷಣೆಯಾದಾಗಿನಿಂದಲೂ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಪಕ್ಷಾಂತರ ಪರ್ವ ಜೋರಾಗಿದೆ. ಪ್ರಮುಖವಾಗಿ ಆಡಳಿತ ಪಕ್ಷ ಬಿಜೆಪಿಗೆ ಪ್ರತಿದಿನ ಶಾಕ್ ಮೇಲೆ ಶಾಕ್ ಒದಗಿ ಬರುತ್ತಿದ್ದು, ಪ್ರಮುಖ ಮುಖಂಡರು ಸೇರಿದಂತೆ ಅನೇಕ ಶಾಸಕರು, ಸಚಿವರು ಬೇರೆ ಬೇರೆ ಪಕ್ಷಗಳಿಗೆ ಜಂಪ್ ಆಗ್ತಿದ್ದಾರೆ.
ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ನಲ್ಲಿ ಪ್ರಮುಖ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಕಳೆದ 72 ಗಂಟೆಗಳಲ್ಲಿ ಅನೇಕ ಸಚಿವರು ಸೇರಿದಂತೆ 14 ಶಾಸಕರು ಪಕ್ಷ ತೊರೆದಿದ್ದಾರೆ. ಇವರೆಲ್ಲರೂ ಪ್ರಮುಖವಾಗಿ ಒಬಿಸಿ ಹಾಗೂ ಬ್ರಾಹ್ಮಣ ಸಮುದಾಯದವರು ಅನ್ನೋದು ಇಲ್ಲಿ ಗಮನಾರ್ಹ.
ಬಿಜೆಪಿ ತೊರೆದವರ ವಿವರ:
- ಸ್ವಾಮಿ ಪ್ರಸಾದ್ ಮೌರ್ಯ
- ಬ್ರಿಜೇಶ್ ಕುಮಾರ್ ಪ್ರಜಾಪತಿ
- ಭಗವತಿ ಸಾಗರ್ ಪ್ರಸಾದ್
- ವಿನಯ್ ಶೌಖ್ಯ
- ರೋಶನ್ ಲಾಲ್ ವರ್ಮಾ
- ಧಾರಾ ಸಿಂಗ್ ಚೌಹಾಣ್
- ಮುಕೇಶ್ ವರ್ಮಾ
- ಧರಂ ಸಿಂಗ್ ಸೈನಿ
- ಓಂ ಪ್ರಕಾಶ್ ರಾಜಬರ್