ಇಸ್ಲಾಮಾಬಾದ್:ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ತಮ್ಮ ಪಕ್ಷದ ಶಾಸಕರಾದ ಅಬ್ದುಲ್ ಕಯ್ಯುಮ್ ನಿಯಾಜಿಯನ್ನು ಪಾಕ್ ಆಕ್ರಮಿತ ಕಾಶ್ಮೀರದ ಮುಂದಿನ ಪ್ರಧಾನಿಯಾಗಿ ನೇಮಿಸಿದ್ದಾರೆ.ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಬ್ಬಾಸ್ ಪುರ್ - ಪೂಂಚ್ ಪ್ರದೇಶದಿಂದ ನಿಯಾಜಿ ಗೆಲುವು ಸಾಧಿಸಿದ್ದರು.
53 ಸದಸ್ಯರ ಸದನದಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್ - ಇ - ಇನ್ಸಾಫ್ (ಪಿಟಿಐ) ಪಕ್ಷವು 32 ಸ್ಥಾನಗಳನ್ನು ಪಡೆದುಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಿಟಿಐ ಸರ್ಕಾರ ರಚಿಸುತ್ತಿರುವುದು ಇದೇ ಮೊದಲು.
POK ನಲ್ಲಿ ನಡೆದ ಇತ್ತೀಚಿನ ಚುನಾವಣೆಯನ್ನು ಭಾರತ ತಿರಸ್ಕರಿಸಿದೆ. ಇದು ಪಾಕಿಸ್ತಾನದ "ತನ್ನ ಅಕ್ರಮ ಆಕ್ರಮಿತ ಮರೆಮಾಚುವ" ಪ್ರಯತ್ನ ಈ ಬಗ್ಗೆ ತಾನು ತೀವ್ರ ಪ್ರತಿಭಟನೆಯನ್ನು ಮಾಡಿದ್ದಾಗಿ ಭಾರತ ಹೇಳಿದೆ.
ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿ, ಪ್ರಧಾನಿ ಖಾನ್ ಅವರು PoKಯಲ್ಲಿ ಪಿಟಿಐ ಸರ್ಕಾರವನ್ನು ಮುನ್ನಡೆಸಲು ನಿಯಾಜಿ ಅವರನ್ನು ಆಯ್ಕೆ ಮಾಡಿದರು ಎಂದು ತಿಳಿಸಿದ್ದಾರೆ. ಸುದೀರ್ಘ ಸಮಾಲೋಚನೆ ಮತ್ತು ಕೆಲವು ಸಲಹೆಗಳ ಪರಿಶೀಲನೆಯ ನಂತರ, ಪಾಕಿಸ್ತಾನದ ಪ್ರಧಾನಿ ಪಿಟಿಐ ಪಕ್ಷ ಅಧ್ಯಕ್ಷ ಇಮ್ರಾನ್ ಖಾನ್ ಅವರು ಹೊಸದಾಗಿ ಚುನಾಯಿತರಾದ ಶಾಸಕ ಶ್ರೀ ಅಬ್ದುಲ್ ಕಯ್ಯುಮ್ ನಿಯಾಜಿ ಅವರನ್ನು ಪಿಒಕೆ ಪ್ರಧಾನಿ ಹುದ್ದೆಗೆ ನಾಮ ನಿರ್ದೇಶನ ಮಾಡಿದ್ದಾರೆ ಎಂದು ಅವರು ಬರೆದಿದ್ದಾರೆ.