ಕರ್ನಾಟಕ

karnataka

ETV Bharat / bharat

ಮಕ್ಕಳಿಗೆ ಲಸಿಕೆ ನೀಡುತ್ತಿರುವುದು ಅತ್ಯಂತ ಮಹತ್ವದ ಹೆಜ್ಜೆ: ಪ್ರಧಾನಿ ಮೋದಿ

ಜನವರಿ 3ರಿಂದ 15- 18 ವರ್ಷದೊಳಗಿನವರಿಗೆ ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಿದ್ದು, ಸುಮಾರು 40 ಲಕ್ಷ ಮಂದಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Important step in protecting youth population: PM Modi
ಮಕ್ಕಳಿಗೆ ಲಸಿಕೆ ನೀಡುತ್ತಿರುವುದು ಅತ್ಯಂತ ಮಹತ್ವದ ಹೆಜ್ಜೆ: ಪ್ರಧಾನಿ ಮೋದಿ

By

Published : Jan 4, 2022, 8:27 AM IST

ನವದೆಹಲಿ:ಸೋಮವಾರದಿಂದ 15ರಿಂದ 18 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ನೀಡಲು ಪ್ರಾರಂಭ ಮಾಡಿದ್ದು, ಯುವಜನರನ್ನು ಕೋವಿಡ್ ಸಾಂಕ್ರಾಮಿಕ ರೋಗದಿಂದ ರಕ್ಷಣೆ ಮಾಡಲು ಇದು ಅತ್ಯಂತ ಮಹತ್ವದ ಹೆಜ್ಜೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕೆಂದು ಮೋದಿ ಕರೆ ನೀಡಿದ್ದಾರೆ. ಲಸಿಕೆ ಪಡೆದ 15-18 ವರ್ಷದೊಳಗಿನ ನನ್ನ ಎಲ್ಲ ಯುವ ಸ್ನೇಹಿತರಿಗೆ ಅಭಿನಂದನೆಗಳು. ಅವರ ಪೋಷಕರಿಗೂ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಲಸಿಕಾ ಅಭಿಯಾನದ ಮೊದಲ ದಿನ ಸುಮಾರು 40 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ರಾತ್ರಿ 8 ಗಂಟೆಯವರೆಗೆ ಈ ಲಸಿಕೆ ಅಭಿಯಾನ ಮುಂದುವರೆದಿತ್ತು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಪ್ಯಾಂಗಾಂಗ್ ಸರೋವರದ ಬಳಿ ಚೀನಾದಿಂದ ಸೇತುವೆ ನಿರ್ಮಾಣ, ಉಪಗ್ರಹ ಚಿತ್ರಗಳಿಂದ ದೃಢ

ABOUT THE AUTHOR

...view details