ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
06:39 February 27
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
ರಾಜ್ಯ...
- ಬೆಳಗ್ಗೆ 9ಕ್ಕೆ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ ಆಚರಣೆ
- ಬೆಳಗ್ಗೆ 9.45ಕ್ಕೆ ಕಾವೇರಿಯಲ್ಲಿ ಸಿಎಂರನ್ನು ಭೇಟಿ ಮಾಡಲಿರುವ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ನಿಯೋಗ
- ಬೆಳಗ್ಗೆ 10ಕ್ಕೆ ಫ್ರೀಡಂ ಪಾರ್ಕ್ನಲ್ಲಿ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಧರಣಿ
- ಬೆಳಗ್ಗೆ 10ಕ್ಕೆ ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಸಿಎಂರಿಂದ ಮೇಕ್ ಇನ್ ಇಂಡಿಯಾ ಲಾಂಛನ ಬಿಡುಗಡೆ
- ಬೆಳಗ್ಗೆ 10.20 ಕ್ಕೆ ವಿಧಾನಸೌಧದಲ್ಲಿ ಮಾಜಿ ಸಿಎಂ ಕೆಸಿ ರೆಡ್ಡಿ ಪುಣ್ಯತಿಥಿ, ಪ್ರತಿಮೆಗೆ ಸಿಎಂರಿಂದ ಮಾಲಾರ್ಪಣೆ
- ಬೆಳಗ್ಗೆ 10.20ಕ್ಕೆ ಬಿಜೆಪಿ ಕಚೇರಿಯಲ್ಲಿ ಕಟೀಲ್ರಿಂದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ಉದ್ಘಾಟನೆ ಮತ್ತು ಮಾಧ್ಯಮಗೋಷ್ಟಿ
- ಬೆಳಗ್ಗೆ 11.30ಕ್ಕೆ ಮೌರ್ಯ ಸರ್ಕಲ್ನಲ್ಲಿ ಇಂಧನ ಬೆಲೆ ಏರಿಕೆ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
- ಸಂಜೆ 5.30ಕ್ಕೆ ವಿದಾನಸೌಧದಲ್ಲಿ ಸಿಎಂರಿಂದ ಕರ್ನಾಟಕ ವಿಮಾ ಪರಿಹಾರ ನೀತಿ ಲೋಕಾರ್ಪಣೆ
ರಾಷ್ಟ್ರೀಯ...
- ಇಂದಿನಿಂದ ದೆಹಲಿ ಸೇರಿದಂತೆ 12 ರಾಜ್ಯಗಳಿಂದ ಬರುವವರಿಗೆ 7 ಐಸೋಲೇಷನ್ ಕಡ್ಡಾಯ ಮಾಡಿದ ಒಡಿಶಾ ಸರ್ಕಾರ
- ಜಮ್ಮು ಕಾಶ್ಮೀರದಲ್ಲಿ 6 ಮಂದಿ ಐಎಎಸ್ ಅಧಿಕಾರಿಗಳು ಸೇರಿದಂತೆ 9 ಅಧಿಕಾರಿಗಳು ವರ್ಗಾವಣೆ
- ಇಂದಿನಿಂದ ಮಹಾರಾಷ್ಟ್ರ, ಕೇರಳದಿಂದ ಯುಪಿಗೆ ಆಗಮಿಸುವ ವಿಮಾನ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಕಡ್ಡಾಯ
- ವಾರಣಾಸಿಗೆ ಭೇಟಿ ನೀಡಲಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ