- ದೇಶಾದ್ಯಂತ ಇಂದಿನಿಂದ ಹಿರಿಯ ನಾಗರಿಕರು, ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕಾ ಲಸಿಕೆ ಅಭಿಯಾನ ಆರಂಭ
- ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಆಸ್ಪತ್ರೆಯಲ್ಲಿ ಮುನ್ನೆಚ್ಚರಿಕಾ ಲಸಿಕಾಕರಣ ಕಾರ್ಯಕ್ರಮಕ್ಕೆ ಸಿಎಂ ಚಾಲನೆ
- ಸಿಎಂ ಕಚೇರಿ ಕೃಷ್ಣದಲ್ಲಿ ಆಡಳಿತ ಸುಧಾರಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉನ್ನತ ಮಟ್ಟದ ಸಭೆ
- ರಾಜ್ಯದಲ್ಲಿ ವೀಕೆಂಡ್ ನಿಷೇಧಾಜ್ಞೆ ಅಂತ್ಯ, ಇಂದಿನಿಂದ ಶಾಲೆಗಳು ಪುನಾರಂಭ, ಎಲ್ಲೆಡೆ ಜಾರಿಯಲ್ಲಿರಲಿದೆ ರಾತ್ರಿ ಕರ್ಫ್ಯೂ
- ಪ್ರಧಾನಿ ಭದ್ರತಾ ಲೋಪ ಪ್ರಕರಣ: ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದಿಂದ ವಕೀಲರ ಧ್ವನಿ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ
- ದೆಹಲಿಯಲ್ಲಿ ಕೋವಿಡ್-19 ಪ್ರಕರಣ ಹೆಚ್ಚಳ ಹಿನ್ನೆಲೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA)ದಿಂದ ಮಹತ್ವದ ಸಭೆ
- ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಲಖನೌದಲ್ಲಿ ಬಿಜೆಪಿಯ 24 ಸದಸ್ಯರ ಚುನಾವಣಾ ಸಮಿತಿ ಸಭೆ
- ಕೋವಿಡ್ ಉಲ್ಬಣ ಹಿನ್ನೆಲೆ ಇಂದಿನಿಂದ ಮಹಾರಾಷ್ಟ್ರ ಹಾಗೂ ತ್ರಿಪುರಾದಲ್ಲಿ 10 ರಾತ್ರಿ ಗಂಟೆಯಿಂದ ನೈಟ್ ಕರ್ಫ್ಯೂ ಜಾರಿ
- ಖ್ಯಾತ ಗಾಯಕ ಕೆ.ಜೆ. ಯೇಸುದಾಸ್ ಹಾಗೂ ಬಾಲಿವುಡ್ ನಟ ಹೃತಿಕ್ ರೋಷನ್ಗೆ ಹುಟ್ಟುಹಬ್ಬದ ಸಂಭ್ರಮ
- ಪ್ರೊ ಕಬಡ್ಡಿ: ಸಂಜೆ 07.30ಕ್ಕೆ ತಮಿಳು ಥಲೈವಾಸ್ Vs ಹರಿಯಾಣ ಸ್ಟೀಲರ್ಸ್ ಹಾಗೂ 08.30ಕ್ಕೆ ಪಿಂಕ್ ಪ್ಯಾಂಥರ್ಸ್ Vs ದಬಾಂಗ್ ಡೆಲ್ಲಿ ಪಂದ್ಯ
- ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್: ಸಂಜೆ 07.30ಕ್ಕೆ ಮುಂಬೈ ಸಿಟಿ ಹಾಗೂ ಬೆಂಗಳೂರು ನಡುವೆ ಹಣಾಹಣಿ
- ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನಲ್ಲಿ ಕಿವೀಸ್ ಹಾಗೂ ಬಾಂಗ್ಲಾದೇಶ ನಡುವೆ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟ
News Today: ದೇಶದಲ್ಲಿ ಇಂದಿನಿಂದ ಬೂಸ್ಟರ್ ಲಸಿಕಾಕರಣ ಸೇರಿದಂತೆ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಮುಖ ವಿದ್ಯಮಾನಗಳು
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಈ ಕೆಳಗಿನಂತಿದೆ..
ಇಂದಿನ ವಿದ್ಯಮಾನಗಳು