ನವದೆಹಲಿ:ಟ್ವಿಟರ್ ಹಂಚಿಕೊಂಡಿರುವ ಮಹಿಳೆಯರ ಕುರಿತಾದ ಎಲ್ಲಾ ಪೋರ್ನೋಗ್ರಫಿ ಮತ್ತು ಅಶ್ಲೀಲ ವಿಷಯಗಳನ್ನು ಒಂದು ವಾರದೊಳಗೆ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವಂತೆ ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ರೇಖಾ ಶರ್ಮಾ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಟ್ವಿಟರ್ನಲ್ಲಿರುವ ಎಲ್ಲಾ ಅಶ್ಲೀಲ ವಿಷಯಗಳನ್ನು ತಕ್ಷಣವೇ ತೆಗೆಯಿರಿ: NCW ತಾಕೀತು - ರಾಷ್ಟ್ರೀಯ ಮಹಿಳಾ ಆಯೋಗ
ಟ್ವಿಟರ್ನಲ್ಲಿರುವ ಎಲ್ಲಾ ಅಶ್ಲೀಲ ಕಂಟೆಂಟ್ಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆಗ್ರಹಿಸಿ ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ರೇಖಾ ಶರ್ಮಾ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ದೆಹಲಿಯ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಪತ್ರ ಬರೆದಿದ್ದಾರೆ. ಈ ಮೊದಲು ಇದೇ ರೀತಿಯ ದೂರನ್ನು ಸ್ವೀಕರಿಸಿದ ನಂತರ, ಆಯೋಗವು ತಕ್ಷಣ ಕ್ರಮ ಕೈಗೊಳ್ಳುವಂತೆ ಟ್ವಿಟರ್‌ನ ಗಮನಕ್ಕೆ ತಂದಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೇಖಾ ಶರ್ಮಾ ಆರೋಪಿಸಿದ್ದಾರೆ.
ಭಾರತೀಯ ಕಾನೂನುಗಳನ್ನು ಉಲ್ಲಂಘಿಸುವುದಲ್ಲದೆ, ಟ್ವಿಟರ್‌ನ ಸ್ವಂತ ನೀತಿಯನ್ನೂ ಉಲ್ಲಂಘಿಸುವ ಇಂತಹ ನಿಷೇಧಿತ ವಿಷಯದ ಲಭ್ಯತೆಯ ಬಗ್ಗೆ ತಿಳಿದಿದ್ದರೂ, ಅವುಗಳನ್ನು ತೆಗೆದುಹಾಕುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಒಂದು ವಾರದೊಳಗೆ ಅಂತಹ ಎಲ್ಲಾ ಅಶ್ಲೀಲ ವಿಷಯಗಳನ್ನು ತೆಗೆದುಹಾಕುವಂತೆ NCW ನಿರ್ದೇಶಿಸಿದೆ. 10 ದಿನಗಳಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸಲು ಟ್ವಿಟರ್ಗೆ ಸೂಚಿಸಲಾಗಿದೆ ಎಂದು ಆಯೋಗ ಹೇಳಿದೆ.