ಕರ್ನಾಟಕ

karnataka

ETV Bharat / bharat

Omicronನಿಂದ ಭಾರತಕ್ಕೆ ಕೋವಿಡ್​ 3ನೇ ಅಲೆ ಭೀತಿ: IMA ಅಧ್ಯಕ್ಷರು ಹೇಳಿದ್ದೇನು ನೋಡಿ!

ಕೋವಿಡ್​ನ ಹೊಸ ರೂಪಾಂತರ ಒಮಿಕ್ರಾನ್​ ಈಗಾಗಲೇ ಭಾರತಕ್ಕೆ ಲಗ್ಗೆ ಹಾಕಿದ್ದು, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ 23 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇದೇ ವಿಚಾರವಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​ ಮುಖ್ಯಸ್ಥ ಡಾ. ಜೆಎ ಜಯಲಾಲ್ ಮಾತನಾಡಿದ್ದಾರೆ.

IMA president Dr JA Jayalal on Omicron
IMA president Dr JA Jayalal on Omicron

By

Published : Dec 6, 2021, 9:25 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ನ ಎರಡನೇ ಅಲೆಯಿಂದ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದ ಭಾರತ ಇದೀಗ ಚೇತರಿಸಿಕೊಂಡಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ಸೋಂಕು ಒಮಿಕ್ರಾನ್​​ ಭಯ ಶುರುವಾಗಿದ್ದು, ದೇಶದಲ್ಲಿ ಈಗಾಗಲೇ 23 ಪ್ರಕರಣ ದಾಖಲಾಗಿವೆ.

ಒಮಿಕ್ರಾನ್​​​ನಿಂದಲೇ ಭಾರತಕ್ಕೆ ಮೂರನೇ ಅಲೆ ಎಂದ IMA ಅಧ್ಯಕ್ಷರು

ಹೊಸ ರೂಪಾಂತರ ಒಮಿಕ್ರಾನ್​ ಬಗ್ಗೆ ಈಟಿವಿ ಭಾರತ ಜೊತೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​ ಮುಖ್ಯಸ್ಥ ಡಾ. ಜೆಎ ಜಯಲಾಲ್​ ಮಾತನಾಡಿದ್ದು, ಹೊಸ ರೂಪಾಂತರಿಯಿಂದಲೇ ಭಾರತದಲ್ಲಿ ಕೋವಿಡ್​​​ 3ನೇ ಅಲೆ ಲಗ್ಗೆ ಹಾಕಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಮಿಕ್ರಾನ್​​ನಿಂದ ಪಾಶ್ಚಿಮಾತ್ಯ ದೇಶಗಳು ಈಗಾಗಲೇ ತೊಂದರೆ ಅನುಭವಿಸುತ್ತಿದ್ದು, ನಮ್ಮ ದೇಶದಲ್ಲೂ ದಿನದಿಂದ ದಿನಕ್ಕೆ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ, ಅದರ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿವೆ. ಇದೀಗ ಜನರು ಇದರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿರಿ:ಸಪ್ತಪದಿ ತುಳಿಯಲು ಸಜ್ಜು.. ಮುಂಬೈನಿಂದ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದ ಕತ್ರಿನಾ-ವಿಕ್ಕಿ

ಭಾರತದಲ್ಲಿ ವ್ಯಾಕ್ಸಿನೇಷನ್​​ ನೀಡುವ ಪ್ರಕ್ರಿಯೆ ಮತ್ತಷ್ಟು ವೇಗಗೊಳಿಸಬೇಕು ಎಂದಿರುವ ಅವರು, ಕೋವಿಡ್​​-19 ಎಲ್ಲ ವೈರಸ್​​ಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಅದಕ್ಕೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಮಿಕ್ರಾನ್​​ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಸಾಮೂಹಿಕ ಸಮಾರಂಭ ಹಾಗೂ ಅನಗತ್ಯ ಪ್ರವಾಸದ ಮೇಲೆ ಕಡಿವಾಣ ಹಾಕುವಂತೆ ಡಾ. ಜಯಲಾಲ್ ಸಲಹೆ ನೀಡಿದ್ದಾರೆ.

ಭಾರತದಲ್ಲಿ ಈಗಾಗಲೇ 23 ಒಮಿಕ್ರಾನ್​ ಪ್ರಕರಣ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಕೋವಿಡ್​​-19ರ ಡೆಲ್ಟಾ ರೂಪಾಂತರಕ್ಕಿಂತಲೂ ಒಮಿಕ್ರಾನ್​ ವೇಗವಾಗಿ ಹರಡಲಿದೆ ಎಂಬ ಎಚ್ಚರಿಕೆ ನೀಡಿದರು. ಹೊಸ ರೂಪಾಂತರ ಮಕ್ಕಳಲ್ಲಿ ಹೆಚ್ಚಿನ ಅಪಾಯವನ್ನುಂಟು ಮಾಡುವ ಕಾರಣ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅದಷ್ಟು ಬೇಗ ಕೋವಿಡ್​-19 ಲಸಿಕೆ ನೀಡುವ ಬಗ್ಗೆ ಕೇಂದ್ರ ನಿರ್ಧಾರ ಕೈಗೊಳ್ಳಬೇಕು ಎಂದರು.

ABOUT THE AUTHOR

...view details