ಪಾಟ್ನಾ (ಬಿಹಾರ): ಬಿಜೆಪಿಯನ್ನು ತೊರೆದವರು ಎಂದಿಗೂ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ, ನಾನು ಬಿಹಾರ ಸರ್ಕಾರದ ಭಾಗವಲ್ಲದಿದ್ದರೂ, ನನ್ನ ಆತ್ಮ ಪ್ರಸ್ತುತ ಸರ್ಕಾರದೊಳಗೆ ನೆಲೆಸಿದೆ. ಎಂದಿಗೂ ನಮ್ಮ ಪಕ್ಷವನ್ನು ದುರ್ಬಲವಾಗಲು ಬಿಡಬಾರದು ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ನನ್ನ ಆತ್ಮ ಬಿಹಾರ್ ಸರ್ಕಾರದೊಳಗೆ ನೆಲೆಸಿದೆ: ಸುಶೀಲ್ ಕುಮಾರ್ ಮೋದಿ - ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್
ನಾನು ಬಿಹಾರ ಸರ್ಕಾರದ ಭಾಗವಲ್ಲದಿದ್ದರೂ ಸಹ ನನ್ನ ಆತ್ಮ ಪ್ರಸ್ತುತ ಸರ್ಕಾರದೊಳಗೆ ನೆಲೆಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಸುಶೀಲ್ ಕುಮಾರ್ ಮೋದಿ ಅವರನ್ನು ಈ ಬಾರಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಸೇರಿಸಲಾಗಿಲ್ಲ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಗಳಿಸಿದ ನಂತರ, ಬಿಜೆಪಿಯ ಉಪ ಮುಖ್ಯಮಂತ್ರಿಗಳಾಗಿ ಬಿಜೆಪಿ ನಾಯಕರಾದ ತರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಪ್ರಮಾಣವಚನ ಸ್ವೀಕರಿಸಿದರು.
ಕಳೆದ ತಿಂಗಳು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಿಸಲಾಗಿದೆ. ರಾಜ್ಯಸಭಾ ಉಪಚುನಾವಣೆ ಡಿಸೆಂಬರ್ 14 ರಂದು ನಿಗದಿಯಾಗಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಡಿಸೆಂಬರ್ 3 ಕೊನೆಯ ದಿನವಾಗಿದ್ದು, ಉಪಚುನಾವಣೆಗೆ ಸುಶೀಲ್ ಕುಮಾರ್ ಮೋದಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.