ಕರ್ನಾಟಕ

karnataka

ETV Bharat / bharat

ಅಕ್ರಮ ಗಣಿಗಾರಿಕೆ ವೇಳೆ ಕುಸಿದ ಗುಡ್ಡ.. 6 ಕಾರ್ಮಿಕರು ದುರ್ಮರಣ, ಹಲವರ ಸ್ಥಿತಿ ಗಂಭೀರ

Illegal mining in Dhanbad : ಅಕ್ರಮ ಗಣಿಗಾರಿಕೆ ವೇಳೆ ಕಾರ್ಮಿಕರ ಮೇಲೆ ಗುಡ್ಡ ಕುಸಿದು ಬಿದ್ದಿರುವ ಕಾರಣ ಆರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಾರ್ಖಂಡ್​ನಲ್ಲಿ ಈ ದುರ್ಘಟನೆ ನಡೆದಿದೆ.

illegal mining in dhanbad
illegal mining in dhanbad

By

Published : Feb 1, 2022, 7:29 PM IST

Updated : Feb 1, 2022, 8:13 PM IST

ಧನ್​ಬಾದ್​(ಜಾರ್ಖಂಡ್​):ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಕಾರ್ಮಿಕರ ಮೇಲೆ ಗುಡ್ಡ ಕುಸಿದು ಬಿದ್ದಿರುವ ಪರಿಣಾಮ ಆರು ಮಂದಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧನ್​ಬಾದ್​ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.

ಜಾರ್ಖಂಡ್​ನ ಧನ್ಬಾದ್​ನಲ್ಲಿ ಅಕ್ರಮ ಗಣಿಗಾರಿಕೆ ವೇಳೆ ದುರಂತ

ಧನ್​ಬಾದ್​​ನ ಗೋಪಿನಾಥಪುರದಲ್ಲಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲಾಗ್ತಿತ್ತು. ಈ ವೇಳೆ ಏಕಾಏಕಿಯಾಗಿ ಗುಡ್ಡ ಕುಸಿತಗೊಂಡಿರುವ ಕಾರಣ ಕಾರ್ಮಿಕರು ಅದರೊಳಗೆ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಹೆಚ್ಚಿನ ಕಾರ್ಮಿಕರು ಇದರೊಳಗೆ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನಾ ಸ್ಥಳದಲ್ಲಿ ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ. ಈಗಾಗಲೇ ಓರ್ವ ಮಹಿಳೆಯನ್ನ ಜೀವಂತವಾಗಿ ಹೊರತೆಗೆಯಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಜಿಲ್ಲಾಡಳಿತ, ಸ್ಥಳೀಯ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಉಪಸ್ಥಿತರಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕಲ್ಲಿದ್ದಲು ಪ್ರದೇಶದಲ್ಲಿ ನೀರು ನಿಂತುಕೊಂಡಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ದುರ್ಘಟನೆ ನಡೆದ ಸ್ಥಳಕ್ಕೆ ಈಗಾಗಲೇ ಸ್ಥಳೀಯ ಶಾಸಕಿ ಅಪರ್ಣಾ ಸೇನ್​ಗುಪ್ತ ಭೇಟಿ ನೀಡಿದ್ದು, ಹೇಮಂತ್ ಸೋರೆನ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದೇ ಕಾರಣಕ್ಕಾಗಿ ಅನೇಕ ಅಮಾಯಕ ಕಾರ್ಮಿಕರು ಬಲಿಯಾಗುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 1, 2022, 8:13 PM IST

ABOUT THE AUTHOR

...view details