ನವದೆಹಲಿ:ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಬಂಧಿತ ಆಪ್ತನ ಮಾಹಿತಿ ಮೇರೆಗೆ ಅಕ್ರಮವಾಗಿ ಗಣಿಗಾರಿಕೆ ಮಾಡಿದ ಕಲ್ಲಿನ ಚಿಪ್ಸ್ ಮತ್ತು ಕಲ್ಲು ಬಂಡೆಗಳನ್ನು ಸಾಗಿಸಲು ಬಳಸಲಾಗಿದ್ದ 30 ಕೋಟಿ ರೂಪಾಯಿ ಮೌಲ್ಯದ ಹಡಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೇನ್ ರಾಜಕೀಯ ಸಹಾಯಕರಾದ ಪಂಕಜ್ ಮಿಶ್ರಾ ಅವರನ್ನು ಇತ್ತೀಚಿಗೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಡಗು ಪಂಕಜ್ ಮಿಶ್ರಾ ಅವರಿಗೆ ಸೇರಿದ್ದು, ಇದಕ್ಕೆ ಇನ್ಫ್ರಾಲಿಂಕ್-III ಎಂದು ಹೆಸರಿಡಲಾಗಿದೆ. ಸುಕರ್‌ಗಢ್ ಘಾಟ್‌ನಲ್ಲಿ ಯಾವುದೇ ಅನುಮತಿಯಿಲ್ಲದೇ, ಕಾನೂನುಬಾಹಿರವಾಗಿ ಈ ಹಡಗನ್ನು ಬಳಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.