ಹೈದರಾಬಾದ್: ಇಲ್ಲಿನ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ 7 ಕೋಟಿ ಮೊತ್ತದ ಅಪಾರ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಶಾರ್ಜಾ ಮೂಲಕ ಸುಡಾನ್ನಿಂದ ಹೈದರಾಬಾದ್ಗೆ ಬಂದ 23 ಪ್ರಾಯಾಣಿಕರು ಅನ್ನು ಕಸ್ಟಮ್ ಅಧಿಕಾರಿಗಳು ಪರಿಶೀಲಿಸಿದಾಗ ಅಕ್ರಮ ಚಿನ್ನ ಪತ್ತೆಯಾಗಿದೆ. ವಾಯು ಗುಪ್ತಚರದಳದ ಅಧಿಕಾರಿಗಳ ಮಾಹಿತಿ ಬೇರೆಗೆ ಜಿ9 458 ವಿಮಾನದಲ್ಲಿ ಕಸ್ಟಮ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ವೇಳೆ, 14.9063 ಗ್ರಾಂ ಬಂಗಾರ ಪತ್ತೆಯಾಗಿದೆ. 23 ಪ್ರಯಾಣಿಕರು ಶೂ, ಟೈ ಮತ್ತು ಬಟ್ಟೆಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದರು. ಇನ್ನು ಈ ಕೃತ್ಯವನ್ನು ನಡೆದ ಪ್ರಮುಖ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರ ವಿಚಾರಣೆ ಮುಂದುವರಿಸಲಾಗಿದೆ. ಬಂಧಿತರೆಲ್ಲರೂ ಸುಡಾನ್ ದೇಶದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನ ಕದ್ದು ಪರಾರಿ:ಮನೆ ಮಾಲಕಿಯ ವಿಶ್ವಾಸವನ್ನು ಬಳಸಿಕೊಂಡು 7 ಕೋಟಿ ಮೊತ್ತದ ಚಿನ್ನ ಕದ್ದು ಆರೋಪಿ ಪರಾರಿಯಾಗಿರುವ ಘಟನೆ ಹೈದರಾಬಾದ್ನ ಎಸ್ಸರ್ನಗರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ರಾಧಿಕಾ ಎಂಬ ಮಹಿಳೆ ಚಿನ್ನದ ವ್ಯಾಪಾರ ಮಾಡುತ್ತಿದ್ದರು. ಇವರ ಬಳಿ ಹಲವು ವರ್ಷಗಳಿಂದ ಕಾರ್ ಡ್ರೈವರ್ ಆಗಿ ಶ್ರೀನಿವಾಸ್ ಎಂಬಾತ ಕಾರ್ಯ ನಿರ್ವಹಿಸುತ್ತಿದ್ದ. ನಿಷ್ಟೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಈತ ರಾಧಿಕಾ ನಂಬಿಕೆಯನ್ನು ಗಳಿಸಿದ್ದ. ಇದೇ ಹಿನ್ನೆಲೆ ರಾಧಿಕಾಗೆ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ 50 ಲಕ್ಷ ಮೌಲ್ಯದ ಆಭರಣದ ಜೊತೆಗೆ ಸಿರಿಗಿರಿರಾಜ್ ಜೆಮ್ಸ್ ಅಂಡ್ ಜ್ಯೂವೆಲರ್ಗೆ ಸಾಗಿಸುವಂತೆ 7 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣವನ್ನು ನೀಡಿದ್ದರು.