ಲಖನೌ (ಉತ್ತರ ಪ್ರದೇಶ):ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಕಟ್ಟಡಗಳ ಕೆಡವಲಾಗುತ್ತಿದ್ದು, ಈ ಸಂಬಂಧ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಒಡೆತನದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವಂತೆ ಲಖನೌ ಅಭಿವೃದ್ಧಿ ಪ್ರಾಧಿಕಾರ ಆದೇಶಿಸಿದೆ.
ಈ ಸಂಬಂಧ ಲಖನೌ ಅಭಿವೃದ್ಧಿ ಪ್ರಾಧಿಕಾರ ಹಜರತ್‌ಗಂಜ್‌ನ ವಲಯ 6 ರಲ್ಲಿರುವ ರಾಣಿ ಸುಲ್ತಾನೇಟ್ ಮಾಲ್ ಅನ್ನು ಇಂದು ಬೆಳಗ್ಗೆ ನೆಲಸಮ ಮಾಡಿದೆ. ಈ ವೇಳೆ ಹೆಚ್ಚಿನ ಸಂಖ್ಯೆ ಅಧಿಕಾರಿಗಳು ಮತ್ತು ಪೊಲೀಸರು ಉಪಸ್ಥಿತರಿದ್ದರು ಎಂದು ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.
ಓದಿ: ಪಾಕ್ ನುಸುಳುಕೋರನ ಸದೆಬಡಿದ ಬಿಎಸ್ಎಫ್ ಸಿಬ್ಬಂದಿ
ಪ್ರಮುಖವಾಗಿ ಕಾರ್ಯ ನಿರ್ವಾಹಕ ಇಂಜಿನಿಯರ್ ಕಮಲ್ಜೀತ್, ಭಾರತ್ ಪಾಂಡೆ, ಇಂಜಿನಿಯರ್ ನಿತ್ಯಾನಂದ ಚೌಬೆ ಮತ್ತು ಸಹಾಯಕ ಇಂಜಿನಿಯರ್ ಎನ್.ಎಸ್.ಶಕ್ಯ ಅವರೊಂದಿಗೆ ಲಖನೌ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ರಿತು ಸುಹಾಸ್ ಸ್ಥಳದಲ್ಲಿದ್ದರು ಎನ್ನಲಾಗುತ್ತಿದೆ.
ಮುಖ್ತಾರ್ ಅನ್ಸಾರಿ ಒಡೆತನದ ಅಕ್ರಮ ಕಟ್ಟಡಗಳು ನೆಲಸಮ ಇದಕ್ಕೂ ಮೊದಲು ಲಖನೌ ಅಭಿವೃದ್ಧಿ ಪ್ರಾಧಿಕಾರ ಲಾಲ್‌ಬಾಗ್ ಪ್ರದೇಶದಲ್ಲಿ ಡ್ರ್ಯಾಗನ್ ಮಾರ್ಟ್ ಅನ್ನು ನೆಲಸಮಗೊಳಿಸಿತ್ತು. ಇದು ಮಾರ್ಕ್ ಲಖನೌ ಅಭಿವೃದ್ಧಿ ಪ್ರಾಧಿಕಾರದ (ಎಲ್ಡಿಎ) ವಲಯ 6 ರಲ್ಲಿ ಬರುತ್ತದೆ.