ಮುಂಬೈ:ಟಾಟಾ ಸನ್ಸ್ ಸೋಮವಾರ ಟರ್ಕಿ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕೆರ್ ಐಶೆ ಅವರನ್ನು ಏರ್ ಇಂಡಿಯಾದ ಸಿಇಒ ಮತ್ತು ಎಂಡಿ ಆಗಿ ನೇಮಕ ಮಾಡಿದೆ.
ವಿಶೇಷ ಆಹ್ವಾನಿತರಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಆಗಮಿಸಿದ್ದು, ಇಲ್ಕೆರ್ ಐಶೆ ಅವರ ಉಮೇದುವಾರಿಕೆಯನ್ನು ಪರಿಗಣಿಸಲು ಏರ್ ಇಂಡಿಯಾ ಮಂಡಳಿಯು ಸೋಮವಾರ ಮಧ್ಯಾಹ್ನ ಸಭೆ ಸೇರಿತ್ತು.