ಕರ್ನಾಟಕ

karnataka

ETV Bharat / bharat

ಐಐಟಿಗಳು, ಐಐಎಂಗಳು ಹಾಗೂ ಇಸ್ರೋ ನೆಹರು ಅವರ ದೂರದೃಷ್ಟಿಯ ಫಲಿತಾಂಶ: ಅಶೋಕ್​ ಗೆಹ್ಲೋಟ್​ - ಮಾಜಿ ಪ್ರಧಾನಿ ನೆಹರೂ ಕುರಿತು ರಾಜಸ್ಥಾನ ಸಿಎಂ ಮೆಚ್ಚುಗೆ ಮಾತು

ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ದೂರದೃಷ್ಟಿಯ ಫಲಿತಾಂಶವೇ ಐಐಟಿಗಳು, ಐಐಎಂಗಳು, ಇಸ್ರೋ ಮತ್ತು ಇತರ ಸಂಸ್ಥೆಗಳು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

IITs, IIMs, ISRO result of Nehru's vision:
ರಾಜಸ್ಥಾನ ಸಿಎಂ

By

Published : Dec 16, 2020, 10:50 AM IST

ಜೈಪುರ/ ರಾಜಸ್ಥಾನ: ಉನ್ನತ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪಾತ್ರವನ್ನು ಒಪ್ಪಿಕೊಂಡಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಐಐಟಿಗಳು, ಐಐಎಂಗಳು, ಇಸ್ರೋ ಮತ್ತು ಇಂತಹ ಇತರ ಸಂಸ್ಥೆಗಳು ನೆಹರು ಅವರ ದೂರದೃಷ್ಟಿಯ ಧ್ಯೋತಕವಾಗಿವೆ ಎಂದು ಹೊಗಳಿದ್ದಾರೆ.

ಬನ್ಸ್ವಾರದ ಗೋವಿಂದ್ ಗುರು ಬುಡಕಟ್ಟು ವಿಶ್ವವಿದ್ಯಾಲಯವು ವಿಡಿಯೋ ಕಾನ್ಫರೆನ್ಸ್​ ಮೂಲಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರಗಳು ಉನ್ನತ ಶಿಕ್ಷಣದತ್ತ ಗಮನ ಹರಿಸಿದ್ದರಿಂದ ಹಲವಾರು ಭಾರತೀಯ ವೈದ್ಯರು ಮತ್ತು ಎಂಜಿನಿಯರ್‌ಗಳು ಜಾಗತಿಕವಾಗಿ ಖ್ಯಾತಿ ಗಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಭಾರತ ಸಾಧಿಸಿರುವ ಡಿಜಿಟಲ್ ಕ್ರಾಂತಿಯು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ದೃಷ್ಟಿ ಮತ್ತು ಆಲೋಚನೆಗಳಿಂದಾಗಿ ಪರಿಣಾಮ ಬೀರಿವೆ ಎಂದರು. ನೆಹರು ಅವರ ಅಧಿಕಾರಾವಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದತ್ತ ಹೆಚ್ಚು ಗಮನ ಹರಿಸಲಾಗಿದ್ದು, ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಯಿತು. ಅವರ ನಂತರ, ಸಹ ಕಾಂಗ್ರೆಸ್ ಸರ್ಕಾರಗಳು ಅವರ ದೃಷ್ಟಿಕೋನವನ್ನೇ ಮುಂದುವರಿಸಿಕೊಂಡು ಬಂದವು ಎಂದು ಗೆಹ್ಲೋಟ್​ ಹೇಳಿದ್ರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ನ್ಯಾಷನಲ್ ಲಾ ಯೂನಿವರ್ಸಿಟಿ ಮುಂತಾದ ಸಂಸ್ಥೆಗಳನ್ನು ರಾಜಸ್ಥಾನದಲ್ಲಿ ಸ್ಥಾಪಿಸಲಾಗಿದೆ ಎಂದು ಇದೇ ವೇಳೆ ಹೇಳಿದರು.

ಈ ಪ್ರದೇಶದ ಬುಡಕಟ್ಟು ಮತ್ತು ಸಾಮಾನ್ಯ ಜನರ ನಡುವೆ ಸಾಮರಸ್ಯವನ್ನು ಬಲಪಡಿಸುವಲ್ಲಿ ರಚನಾತ್ಮಕ ಪಾತ್ರ ವಹಿಸುವಂತೆ ಗೆಹ್ಲೋಟ್ ಅವರು ಗೋವಿಂದ್ ಗುರು ಬುಡಕಟ್ಟು ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ರು.

ಇದನ್ನೂ ಓದಿ:ಆಸ್ತಿ ತೆರಿಗೆ ಪಾವತಿದಾರರಿಂದ ವಂಚನೆ ಆರೋಪ: ಬೆಂಗಳೂರಿನ ಲಕ್ಷಾಂತರ ಜನರಿಗೆ ಬಿಬಿಎಂಪಿ ನೋಟಿಸ್​

For All Latest Updates

TAGGED:

ABOUT THE AUTHOR

...view details