ಚೆನ್ನೈ(ತಮಿಳುನಾಡು):ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ತುಸು ಏರಿಕೆ ಕಂಡು ಬರುತ್ತಿದ್ದು, ಇದೀಗ ಕೆಲವು ರಾಜ್ಯಗಳು ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸುತ್ತಿವೆ. ಇದೀಗ ಮದ್ರಾಸ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಕೋವಿಡ್ ಪ್ರಕರಣಗಳು ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆ 55ರ ಗಡಿ ದಾಟಿದೆ.
ಕೋವಿಡ್ ಹಾಟ್ಸ್ಪಾಟ್ ಆದ ಐಐಟಿ ಮದ್ರಾಸ್: 55ಕ್ಕೇರಿದ ಸೋಂಕಿತರ ಸಂಖ್ಯೆ
ದೆಹಲಿಯ ಕೆಲವು ಶಾಲೆಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ತಮಿಳುನಾಡಿನಲ್ಲಿರುವ ಐಐಟಿ ಮದ್ರಾಸ್ನಲ್ಲಿ ಮಹಾಮಾರಿ ಹೆಚ್ಚಾಗಿದೆ.
IIT Madras covid
ಇಂದೂ ಕೂಡ ಕ್ಯಾಂಪಸ್ನಲ್ಲಿ 25 ಜನರಲ್ಲಿ ಹೊಸದಾಗಿ ಕೋವಿಡ್ ಪ್ರಕರಣ ದಾಖಲಾಗಿದ್ದು ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 55 ತಲುಪಿದೆ ಎಂದು ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ತಿಳಿಸಿದ್ದಾರೆ. ಇಲ್ಲಿಯವರೆಗೆ 1,420 ಜನರಿಗೆ ಆರ್ಟಿ-ಪಿಸಿಆರ್ ಟೆಸ್ಟ್ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕಳೆದೆರಡು ದಿನಗಳ ಹಿಂದೆ ಐಐಟಿ ಕ್ಯಾಂಪಸ್ನಲ್ಲಿ 10 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದಾದ ಬಳಿಕ ನಿನ್ನೆ 12 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ.
ಇದನ್ನೂ ಓದಿ:ಕ್ರೂಸರ್-ಟ್ರಕ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಮಂದಿ ದುರ್ಮರಣ, ಹಲವರು ಗಂಭೀರ