ಚೆನ್ನೈ : ಐಐಟಿ ಮದ್ರಾಸ್‌ನ ಸಂಶೋಧನಾ ತಂಡವು ತಿರುನಲ್ವೇಲಿ ಜಿಲ್ಲೆಯ ತಿಸೈಯಾವಿಲೈ ಪ್ರದೇಶದ ಅಯಂಕುಲಂ ಗ್ರಾಮದ ಬಳಿ ತೆರೆದ ಕೃಷಿ ಬಾವಿಯನ್ನು ಅಧ್ಯಯನ ಮಾಡುವ ಮೂಲಕ ಸಂಯೋಜಿತ ಪ್ರವಾಹ ಮತ್ತು ಬರ ತಗ್ಗಿಸುವಿಕೆಗಾಗಿ ಕ್ಷಿಪ್ರ ಅಂತರ್ಜಲ ಮರುಪೂರಣ ಕಾರ್ಯವಿಧಾನವನ್ನು ಅಳವಡಿಸಲು ಪ್ರಸ್ತಾಪ ಮಾಡಿದೆ.
ಬಾವಿಯು ಹಲವಾರು ವಾರಗಳವರೆಗೆ ಪ್ರತಿ ಸೆಕೆಂಡಿಗೆ 1,500-2,500 ಲೀಟರ್ ನೀರನ್ನು ಉಕ್ಕಿ ಹರಿಯದಂತೆ ಮಾಡಿ ಅದನ್ನು ಹೀರಿಕೊಳ್ಳುತ್ತದೆ ಎಂದು ಐಐಟಿ ಮದ್ರಾಸ್ ಈ ಯೋಜನೆಗೆ ಪ್ರಸ್ತಾವನೆಯನ್ನು ತಿರುನಲ್ವೇಲಿ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.
ಪ್ರೊಫೆಸರ್ ವೆಂಕಟರಾಮನ್ ಈ ಸಂಶೋಧನಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಾವಿಗೆ ಭೇಟಿ ನೀಡಿರುವ ಅವರು ಕ್ಷಿಪ್ರ ರೀಚಾರ್ಜ್ ತಂತ್ರಜ್ಞಾನವನ್ನು ಅಳವಡಿಸಲು ಸಲಹೆ ನೀಡಿದ್ದು, ಇದು ಸ್ಥಳೀಯರಿಗೆ, ವಿಶೇಷವಾಗಿ ರೈತ ಸಮುದಾಯಕ್ಕೆ ಸಹಾಯ ಮಾಡಲಿದೆ.