ಕರ್ನಾಟಕ

karnataka

ETV Bharat / bharat

ಜೆಇಇ ಅಡ್ವಾನ್ಸ್ಡ್ ಪರೀಕ್ಷೆ-2021ರ ಫಲಿತಾಂಶ ಇಂದು ಪ್ರಕಟ - IIT JEE Advanced Result 2021

ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ 2021ರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶವು ಇಂದು ಪ್ರಕಟಗೊಳ್ಳಲಿದೆ.

iit-jee-advanced-result-2021-today
ಜೆಇಇ ಅಡ್ವಾನ್ಸ್ಡ್ ಪರೀಕ್ಷೆ-2021ರ ಫಲಿತಾಂಶ ಇಂದು ಪ್ರಕಟ

By

Published : Oct 15, 2021, 3:57 AM IST

ನವದೆಹಲಿ:ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ 2021ರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶವು ಇಂದು ಪ್ರಕಟಗೊಳ್ಳಲಿದೆ. ಜೊತೆಗೆ ಅಂತಿಮ ಕೀ ಉತ್ತರಗಳನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ.

ಈ ಹಿಂದಿನ ವರ್ಷಗಳಂತೆ ಈ ಬಾರಿಯೂ ಕೂಡ ಬೆಳಗ್ಗೆ 10 ಗಂಟೆಗೆ ಫಲಿತಾಂಶ ಹೊರಬರುವ ನಿರೀಕ್ಷೆಯಿದೆ. ಜೆಇಇ ಅಧಿಕೃತ ವೆಬ್‌ಸೈಟ್‌ jeeadv.ac.inನಲ್ಲಿ ಫಲಿತಾಂಶ ಪ್ರಕಟಿಗೊಳ್ಳಲಿದೆ. ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್-2021ರ ರೋಲ್ ಸಂಖ್ಯೆ, ಜನ್ಮದಿನಾಂಕ ಮತ್ತು ಫೋನ್ ನಂಬರ್​ಗಳ ಮೂಲಕ ಫಲಿತಾಂಶವನ್ನು ತಿಳಿದುಕೊಳ್ಳಬಹುದಾಗಿದೆ. ಫಲಿತಾಂಶವು ಅಂಕಪಟ್ಟಿ ಮಾದರಿಯಲ್ಲಿ ಲಭ್ಯವಿರಲಿದ್ದು, ದೇಶದ ಟಾಪರ್‌ಗಳ ಪಟ್ಟಿ ಮತ್ತು ಇತರ ಸಂಬಂಧಿತ ಮಾಹಿತಿಯೂ ಇರಲಿದೆ.

ಜೆಇಇ ಮೇನ್​ ಅರ್ಹ ಅಭ್ಯರ್ಥಿಗಳು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಮತ್ತು ಇತರ ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳ (ಜಿಎಫ್‌ಟಿಐ) ಪ್ರವೇಶಕ್ಕಾಗಿ ನಡೆಯುವ ಜಂಟಿ ಸೀಟು ಹಂಚಿಕೆ ಪ್ರಾಧಿಕಾರ (JoSAA) ದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಜಂಟಿ ಸೀಟು ಹಂಚಿಕೆ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳಿಗೆ ಐಐಟಿಯಲ್ಲಿನ ಸೀಟು ಹಂಚಿಕೆ ನಡೆಯುತ್ತದೆ. ಜೆಇಇ ಅಡ್ವಾನ್ಸ್ಡ್-2021ರಲ್ಲಿ ರ‍್ಯಾಂಕ್ ಪಡೆದ ಎಲ್ಲ ಅಭ್ಯರ್ಥಿಗಳು ಜಂಟಿ ಸೀಟು ಹಂಚಿಕೆ ಪ್ರಾಧಿಕಾರ (JoSAA) ದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳು ಮೊದಲು ನೋಂದಾವಣೆ ಮಾಡಿಕೊಂಡು, ನಂತರ ತಮ್ಮ ಆದ್ಯತೆಯ ಸಂಸ್ಥೆಗಳು ಮತ್ತು ಕೋರ್ಸ್‌ಗಳ ಆಯ್ಕೆಯನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ:ಹಬ್ಬ ಮುಗಿದ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಈ ಪ್ರದೇಶಗಳಿಗೆ ಪವರ್ ಶಾಕ್!

ABOUT THE AUTHOR

...view details