ನವದೆಹಲಿ :ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮೂಲದ ಸ್ಟಾರ್ಟ್ಅಪ್ ಅತಿಚಿಕ್ಕದಾದ ಗಾಳಿಯನ್ನು ಶುದ್ಧೀಕರಿಸುವ ಮಾಸ್ಕ್‌ನಂತೆ ಧರಿಸಬಹುದಾದ ಸಾಧನವನ್ನು ಆವಿಷ್ಕರಿಸಿದೆ.
ನಾಸೋ-95 ಎಂದು ಹೆಸರಿಸಲಾದ ಈ ಚಿಕ್ಕ ಸಾಧನ ಮೂಗಿನ ರಂಧ್ರಕ್ಕೆ ಅಂಟಿಕೊಂಡು, ಗಾಳಿಯನ್ನು ಶುದ್ಧೀಕರಿಸುತ್ತದೆ. ಅಲ್ಲದೇ, ಬ್ಯಾಕ್ಟೀರಿಯಾ, ವೈರಲ್ ಸೋಂಕು, ವಾಯುಮಾಲಿನ್ಯವನ್ನು ತಡೆಯುತ್ತದೆ. ಇದು ಈಗಿರುವ ಎನ್-95 ಮಾಸ್ಕ್ನಷ್ಟೇ ದಕ್ಷತೆ ಹೊಂದಿದೆ ಎಂಬುದು ಕಂಪನಿಯ ಸ್ಪಷ್ಟನೆ.
Naso95 ಅನ್ನು ಬಳಸುವ ವ್ಯಕ್ತಿಯು ಜೆನೆರಿಕ್ ಫೇಸ್‌ಮಾಸ್ಕ್ ಅಥವಾ ಸಡಿಲವಾಗಿ ಮುಖದ ಮೇಲೆ ಧರಿಸುವ ಮಾಸ್ಕ್‌ಗಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. Naso95 ಫೇಸ್ ಮಾಸ್ಕ್‌ನಂತೆ ದೊಡ್ಡದಾಗಿರದೇ 5 ವರ್ಷ ವಯಸ್ಸಿನವರೂ ಸಹ ಇದನ್ನು ಧರಿಸಬಹುದು.