ಕರ್ನಾಟಕ

karnataka

ETV Bharat / bharat

ಗೃಹಬಳಕೆಯ ಪಿಎನ್​ಜಿ ಬೆಲೆಯಲ್ಲಿ 4.25 ರೂ. ಹೆಚ್ಚಳ!

ಪಿಎನ್​ಜಿ ಬೆಲೆಯಲ್ಲಿ ಒಂದೇ ತಿಂಗಳಲ್ಲಿ ಎರಡು ಬಾರಿ ಏರಿಕೆಯಾಗಿದೆ. ಗುರುವಾರ 4.25 ರೂ. ಹೆಚ್ಚಳವಾಗಿದ್ದು, ಇದರಿಂದ ದೆಹಲಿಯಲ್ಲಿ ಪಿಎನ್‌ಜಿ ಪ್ರತಿ ಯೂನಿಟ್‌ಗೆ 45.86 ರೂ.ಗೆ ತಲುಪಿದೆ.

ಗೃಹಬಳಕೆಯ ಪಿಎನ್​ಜಿ ಬೆಲೆ  ಹೆಚ್ಚಳ
ಗೃಹಬಳಕೆಯ ಪಿಎನ್​ಜಿ ಬೆಲೆ ಹೆಚ್ಚಳ

By

Published : Apr 14, 2022, 1:38 PM IST

ನವದೆಹಲಿ: ದೇಶದಲ್ಲಿ ಗೃಹಬಳಕೆಯ ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್​ಜಿ) ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 4.25 ರೂ. ದರ ಹೆಚ್ಚಾಗಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಿಎನ್‌ಜಿ ಪ್ರತಿ ಯೂನಿಟ್‌ಗೆ 45.86 ರೂ.ಗೆ ತಲುಪಿದೆ.

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್​ ತನ್ನ ಒಳಹರಿವಿನ ಗ್ಯಾಸ್ ವೆಚ್ಚವನ್ನು ಸರಿದೂಗಿಸಲು ಈ ಏರಿಕೆ ಮಾಡಿದೆ. ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಪ್ರತಿ ಯೂನಿಟ್‌ಗೆ 45.96 ರೂಪಾಯಿ ಹಾಗೂ ಗುರುಗ್ರಾಮ್‌ನಲ್ಲಿ ಪ್ರತಿ ಕ್ಯೂಬಿಕ್​ ಮೀಟರ್​ಗೆ 44.06 ರೂಪಾಯಿಗೆ ಬೆಲೆ ಜಿಗಿದಿದೆ.

ಈ ಹಿಂದೆ ಏಪ್ರಿಲ್ 1ರಂದು ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 80 ಪೈಸೆ ಮತ್ತು ಪಿಎನ್‌ಜಿ ದರ ಪ್ರತಿ ಘನ ಮೀಟರ್‌ಗೆ 5.85 ರೂ. ಏರಿಕಯಾಗಿತ್ತು. ಅಲ್ಲದೇ, ಇದಕ್ಕೂ ಮೊದಲು ಮಾರ್ಚ್ 24ರಂದು ಕೂಡ ಪಿಎನ್‌ಜಿ ಬೆಲೆಯಲ್ಲಿ ಒಂದು ರೂ.ಗಳಷ್ಟು ಹೆಚ್ಚಿಸಲಾಗಿತ್ತು.

ಇದನ್ನೂ ಓದಿ:ಸತತ ಆರು ದಿನದಿಂದ ತೈಲ ಬೆಲೆ ಯಥಾಸ್ಥಿತಿ.. ಹೀಗಿದೆ ಪೆಟ್ರೋಲ್, ಡೀಸೆಲ್ ದರ

ABOUT THE AUTHOR

...view details