ನವದೆಹಲಿ:ಕರ್ನಾಟಕ ಮೂಲದ ಮಹಿಳೆಯೊಬ್ಬರು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಟರ್ಮಿನಲ್ 3 ರಲ್ಲಿ ಗರ್ಭಿಣಿಗೆ ನೋವು ಕಾಣಿಸಿಕೊಂಡು ಅಲ್ಲಿಯೇ ಜನ್ಮ ಕೊಟ್ಟಿದ್ದಾರೆ. ವಿಮಾನ ನಿಲ್ದಾಣದಲ್ಲೇ ಇದ್ದ ತುರ್ತು ಚಿಕಿತ್ಸಾ ಕೇಂದ್ರಕ್ಕೆ ತಾಯಿ ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
"ಟರ್ಮಿನಲ್ 3 ರಲ್ಲಿ ಕರ್ನಾಟಕ ಮೂಲದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಕಿರಿಯ ಪ್ರಯಾಣಿಕರಿಗೆ ಸ್ವಾಗತ ಕೋರಲಾಗುವುದು. ನಿಲ್ದಾಣದಲ್ಲಿ ಮಗು ಜನಿಸಿರುವುದು ಇದೇ ಮೊದಲು" ಎಂದು ವಿಮಾನ ನಿಲ್ದಾಣದ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ.