ಕರ್ನಾಟಕ

karnataka

ETV Bharat / bharat

'ಶೇರ್' ಸಂಪಾದಕ ಇಫ್ತಿಖರ್ ಇಮಾಮ್ ಸಿದ್ದಿಕಿ ನಿಧನ - ಪ್ರಸಿದ್ಧ ಬರಹಗಾರ ಇಫ್ತಿಖರ್ ಇಮಾಮ್ ಸಿದ್ದಿಕಿ

ಸೀಮಾಬ್ ಅಕ್ಬರಾಬಾದಿ ಅವರ ಮೊಮ್ಮಗ, ಮಾಸಿಕ ಪತ್ರಿಕೆ 'ಶೇರ್'ನ ಸಂಪಾದಕರಾಗಿದ್ದ ಇಫ್ತಿಖರ್ ಇಮಾಮ್ ಸಿದ್ದಿಕಿ ಇಂದು ನಿಧನರಾಗಿದ್ದಾರೆ.

Iftikhar Imam Siddiqi
ಇಫ್ತಿಖರ್ ಇಮಾಮ್ ಸಿದ್ದಿಕಿ ನಿಧನ

By

Published : Apr 4, 2021, 1:29 PM IST

ಮುಂಬೈ:ಪ್ರಸಿದ್ಧ ಬರಹಗಾರ, ಕವಿ ಮತ್ತು ಸೀಮಾಬ್ ಅಕ್ಬರಾಬಾದಿ ಅವರ ಮೊಮ್ಮಗ ಇಫ್ತಿಖರ್ ಇಮಾಮ್ ಸಿದ್ದಿಕಿ ಮುಂಬೈನಲ್ಲಿ ನಿಧನರಾಗಿದ್ದಾರೆ.

'ಶೇರ್' ಭಾರತದ ಅತ್ಯಂತ ಹಳೆಯ ಉರ್ದು ಭಾಷೆಯ ಸಾಹಿತ್ಯ ನಿಯತಕಾಲಿಕೆಗಳಲ್ಲಿ ಒಂದಾಗಿದೆ. ಸಿದ್ದಿಕಿ ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೋಗ್ಯದ ದುರ್ಬಲತೆಯ ಹೊರತಾಗಿಯೂ, ಪ್ರತಿ ತಿಂಗಳು ಪತ್ರಿಕೆ ಪ್ರಕಟವಾಗುತ್ತಿತ್ತು.

ಇದನ್ನೂ ಓದಿ: ಉತ್ತರಾಖಂಡ ಕಾಡ್ಗಿಚ್ಚು: 24 ಗಂಟೆಯಲ್ಲಿ ನಾಲ್ವರು ಸಾವು, ಪ್ರಾಣಿಗಳು ಬಲಿ

ಅವರ ಅಂತಿಮ ವಿಧಿಗಳು ಮುಂಬೈನಲ್ಲಿ ನಡೆಯಲಿದೆ. ಸಿದ್ದಿಕಿ ಅವರನ್ನು ದೇಶದ ಅತ್ಯಂತ ಪ್ರಸಿದ್ಧ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಅವರ ನಿರರ್ಗಳವಾದ ಮಾತು ಮತ್ತು ಶೈಲಿಯು ಕಾವ್ಯ ಜಗತ್ತಿನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details