ಕರ್ನಾಟಕ

karnataka

ETV Bharat / bharat

ಪತ್ರಕರ್ತರಿಗೆ ಈ ದೇಶಗಳು ಸೂಕ್ತವಲ್ಲ: ಅಲ್ಲೇ ಹೆಚ್ಚು ಸಾವು, ಅಲ್ಲೇ ಹೆಚ್ಚು ಜೈಲು!

ಪತ್ರಕರ್ತರಿಗೆ ಕೆಲವೊಂದು ದೇಶಗಳು ಅಪಾಯಕಾರಿಯಾಗಿವೆ. ಅಲ್ಲಿ ಅವರ ಜೀವಕ್ಕೆ ಯಾವುದೇ ರಕ್ಷಣೆ ಇರುವುದಿಲ್ಲ. ಇನ್ನು ಕೆಲವು ದೇಶಗಳು ಪತ್ರಕರ್ತರಿಗೆ ಶಿಕ್ಷೆ ನೀಡಿ ಜೈಲಿಗೆ ಕಳುಹಿಸಿವೆ. ಈ ಬಗ್ಗೆ ಐಎಪ್​ಜೆ ತನ್ನ ವರದಿಯಲ್ಲಿ ಹೇಳಿದೆ.

IFJ 30th Annual report  Killing of Journalists  report on Killing of Journalists  Killing of Journalists and Media staff  journalist death  ಐಎಫ್​ಜೆ 30 ವರ್ಷದ ವರದಿ  ಐಎಫ್​ಜೆ ವರದಿ  ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ ವರದಿ  ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ ವರದಿ ಸುದ್ದಿ
ಪತ್ರಕರ್ತರಿಗೆ ಈ ದೇಶಗಳು ಸೂಕ್ತವಲ್ಲ

By

Published : Mar 13, 2021, 11:05 AM IST

ಹೈದರಾಬಾದ್:2020ರಲ್ಲಿ ವಿಶ್ವದಾದ್ಯಂತ ಒಟ್ಟು 65 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಕೆಲಸದ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಂಟರನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್​​ (ಐಎಫ್‌ಜೆ) ಹೇಳಿದೆ.

ಪತ್ರಕರ್ತರ ಸಾವಿನ ಬಗ್ಗೆ ಐಎಫ್‌ಜೆ ತನ್ನ ವಾರ್ಷಿಕ ವರದಿಯ ವಿವರಗಳನ್ನು ಪ್ರಕಟಿಸಿದೆ. ಈ ಸಂಖ್ಯೆ 2019 ಕ್ಕೆ ಹೋಲಿಸಿದರೆ 17 ಹೆಚ್ಚಾಗಿದೆ ಮತ್ತು ಸಾವಿನ ಸಂಖ್ಯೆ 1990 ರ ದಶಕದ ಮಟ್ಟದಲ್ಲಿದೆ ಎಂದು ಹೇಳಲಾಗಿದೆ.

ಮೆಕ್ಸಿಕೊ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಸೊಮಾಲಿಯಾದಲ್ಲಿ ಉಗ್ರಗಾಮಿ ಹಿಂಸಾಚಾರ ಮತ್ತು ಭಾರತ ಮತ್ತು ಫಿಲಿಪೈನ್ಸ್‌ನಲ್ಲಿನ ತೀವ್ರಗಾಮಿಗಳ ಅಸಹಿಷ್ಣುತೆಯಿಂದಾಗಿ ಮಾಧ್ಯಮಗಳಲ್ಲಿ ರಕ್ತಪಾತವಾಗಿದೆ ಎಂದು ಐಎಫ್‌ಜೆ ಪ್ರಧಾನ ಕಾರ್ಯದರ್ಶಿ ಆಂಥೋನಿ ಬೆಲಾಂಜರ್ ಹೇಳಿದ್ದಾರೆ.

ಐದು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಗರಿಷ್ಠ ಸಂಖ್ಯೆಯ ಪತ್ರಕರ್ತರು ಕೊಲ್ಲಲ್ಪಟ್ಟ ದೇಶಗಳ ಪಟ್ಟಿಯಲ್ಲಿ ಮೆಕ್ಸಿಕೊ ಅಗ್ರಸ್ಥಾನದಲ್ಲಿದೆ. ಇದರ ನಂತರ ಅಫ್ಘಾನಿಸ್ತಾನದಲ್ಲಿ 10, ಪಾಕಿಸ್ತಾನದಲ್ಲಿ ಒಂಬತ್ತು, ಭಾರತದಲ್ಲಿ ಎಂಟು, ಫಿಲಿಪೈನ್ಸ್ ಮತ್ತು ಸಿರಿಯಾದಲ್ಲಿ ತಲಾ ನಾಲ್ಕು ಮತ್ತು ನೈಜೀರಿಯಾ ಮತ್ತು ಯೆಮನ್‌ನಲ್ಲಿ ಮೂರು ಸಾವುಗಳು ಸಂಭವಿಸಿವೆ.

ಇರಾಕ್, ಸೊಮಾಲಿಯಾ, ಬಾಂಗ್ಲಾದೇಶ, ಕ್ಯಾಮರೂನ್, ಹೊಂಡುರಾಸ್, ಪರಾಗ್ವೆ, ರಷ್ಯಾ ಮತ್ತು ಸ್ವೀಡನ್‌ನಲ್ಲೂ ಸಾವುಗಳು ಸಂಭವಿಸಿವೆ.

ಪ್ರಪಂಚದಾದ್ಯಂತದ ಅನೇಕ ಪತ್ರಕರ್ತರು ಕೆಲಸದ ಕಾರಣದಿಂದಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಟರ್ಕಿ 'ವಿಶ್ವದ ಅತಿದೊಡ್ಡ ಪತ್ರಕರ್ತರ ಜೈಲರ್' ಎಂದು ವರದಿ ಹೇಳಿದೆ.

ಇಲ್ಲಿ ಕನಿಷ್ಠ 67 ಪತ್ರಕರ್ತರು ಜೈಲಿನಲ್ಲಿದ್ದಾರೆ. ಇದರ ನಂತರ ಚೀನಾದಲ್ಲಿ 23, ಈಜಿಪ್ಟ್‌ನಲ್ಲಿ 20, ಎರಿಟ್ರಿಯಾದಲ್ಲಿ 16 ಮತ್ತು ಸೌದಿ ಅರೇಬಿಯಾದಲ್ಲಿ 14 ಪತ್ರಕರ್ತರನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.

ABOUT THE AUTHOR

...view details