ಕರ್ನಾಟಕ

karnataka

ETV Bharat / bharat

ಇಫ್ಕೋ ಯುನಿಟ್​ನಲ್ಲಿ ಬಾಯ್ಲರ್ ಸ್ಫೋಟ: ನಾಲ್ವರ ಸಾವು, 15 ಮಂದಿಗೆ ಗಾಯ - ಉತ್ತರ ಪ್ರದೇಶ ಲೇಟೆಸ್ಟ್ ಸುದ್ದಿ

ಡಿಸೆಂಬರ್ 22, 2020ರಲ್ಲಿಯೂ ಇಫ್ಕೋ ಕಂಪನಿಯಲ್ಲಿ ಅವಘಡ ಸಂಭವಿಸಿದ್ದು, ಅಮೋನಿಯಂ ಅನಿಲ ಸೋರಿಕೆಯಾದ ಕಾರಣ ಇಬ್ಬರು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದರು.

iffco-company-boiler-explosion-in-phulpur-up
ಇಫ್ಕೋ ಯುನಿಟ್​ನಲ್ಲಿ ಬಾಯ್ಲರ್ ಸ್ಫೋಟ: ಓರ್ವ ಸಾವು, 10 ಮಂದಿಗೆ ಗಾಯ ಶಂಕೆ

By

Published : Mar 23, 2021, 4:28 PM IST

Updated : Mar 23, 2021, 5:17 PM IST

ಪ್ರಯಾಗ್​ರಾಜ್, ಉತ್ತರ ಪ್ರದೇಶ:ರಸಗೊಬ್ಬರ ಉತ್ಪಾದನೆ ಮಾಡುವ ಇಫ್ಕೋ ಕಂಪನಿಯ ಬಾಯ್ಲರ್ ಸ್ಫೋಟಗೊಂಡು ನಾಲ್ವರು ಸಾವನ್ನಪ್ಪಿ, ಸುಮಾರು 15 ಮಂದಿ ಗಾಯಗೊಂಡಿರುವ ಘಟನೆ ಪ್ರಯಾಗ್​ರಾಜ್​ನ​ ಫುಲ್​​ಪುರ್​ನಲ್ಲಿ ನಡೆದಿದೆ. ಗಾಯಾಳುಗಳನ್ನು ಕಂಪನಿಯ ಒಳಗಿದ್ದ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ದೇಶದಲ್ಲಿ ಯೂರಿಯಾ ಉತ್ಪಾದನೆ ಮಾಡುವಲ್ಲಿ ಈ ಕಂಪನಿ ಅಗ್ರಸ್ಥಾನದಲ್ಲಿದೆ. ಮಧ್ಯಾಹ್ನ ಆಕಸ್ಮಿಕವಾಗಿ ಕಂಪನಿಯ ಬಾಯ್ಲರ್ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದ್ದು, ಅಕ್ಕಪಕ್ಕ ಕೆಲಸ ಮಾಡುತ್ತಿದ್ದವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಅವಘಡದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಇಫ್ಕೋ ಕಂಪನಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಇದನ್ನೂ ಓದಿ:ಏಪ್ರಿಲ್​ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ: ಕೇಂದ್ರ ಘೋಷಣೆ

ಡಿಸೆಂಬರ್ 22, 2020ರಲ್ಲಿಯೂ ಇಲ್ಲಿ ಅವಘಡ ಸಂಭವಿಸಿದ್ದು, ಅಮೋನಿಯಂ ಅನಿಲ ಸೋರಿಕೆಯಾದ ಕಾರಣ ಇಬ್ಬರು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದರು.

ಹಲವು ಅಪಘಾತಗಳ ಹೊರತಾಗಿಯೂ ಕೂಡ ಕಂಪನಿ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದರ ಜೊತೆಗೆ ಮೃತರು ಮತ್ತು ಗಾಯಾಳುಗಳ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

Last Updated : Mar 23, 2021, 5:17 PM IST

ABOUT THE AUTHOR

...view details