ಗೋವಾ(ಪಣಜಿ):ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆ ಕಾಣುತ್ತಿವೆ. ಈ ಹಿನ್ನೆಲೆಯಲ್ಲಿ ದೈನಂದಿನ ಅಗತ್ಯದ ವಸ್ತುಗಳ ದರವೂ ಕೂಡಾ ಏರಿಕೆಯಾಗುತ್ತಿದ್ದು, ಈ ಬೆನ್ನಲ್ಲೇ ಗೋವಾದ ಸಚಿವರೊಬ್ಬರು ಜನರಿಗೆ ವಿಚಿತ್ರವಾದ ಸಲಹೆಯನ್ನು ನೀಡಿದ್ದಾರೆ. ಒಂದು ವೇಳೆ ನಿಮಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಕೊಂಡುಕೊಳ್ಳಲು ಸಾಧ್ಯವಾಗದಿದ್ದರೆ, ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಕಾರನ್ನು ಕೊಂಡುಕೊಳ್ಳಿ ಎಂದು ಸಚಿವ ನಿಲೇಶ್ ಕಬ್ರಾಲ್ ಸಲಹೆ ನೀಡಿರುವ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಪೆಟ್ರೋಲ್, ಡೀಸೆಲ್ ಕೊಳ್ಳಲು ಸಾಧ್ಯವಾಗದಿದ್ದರೆ ಎಲೆಕ್ಟ್ರಿಕ್ ವಾಹನ ಖರೀದಿಸಿ: ಬಿಜೆಪಿ ಸಚಿವನ ವಿಚಿತ್ರ ಸಲಹೆ - ಪೆಟ್ರೋಲ್ ಡೀಸೆಲ್ ಕೊಳ್ಳದಿದ್ದರೆ ವಿದ್ಯುತ್ ವಾಹನ ಕೊಂಡು ಕೊಳ್ಳಿ
ಒಂದು ವೇಳೆ ನಿಮಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಕೊಂಡುಕೊಳ್ಳಲು ಸಾಧ್ಯವಾಗದಿದ್ದರೆ, ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಕಾರನ್ನು ಕೊಂಡುಕೊಳ್ಳಿ ಎಂದು ಗೋವಾ ಸಚಿವ ನಿಲೇಶ್ ಕಬ್ರಾಲ್ ವಿಚಿತ್ರ ಸಲಹೆ ನೀಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಅವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ಸರ್ಕಾರ ರಿಯಾಯಿತಿಯನ್ನು ನೀಡುತ್ತಿದೆ. ಅಷ್ಟೇ ಅಲ್ಲದೇ ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಪರಿಸರದ ಮೇಲೆ ಹಾನಿಯೂ ಕಡಿಮೆಯಾಗಿರುತ್ತದೆ. ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಕೊಂಡುಕೊಳ್ಳಲು ಸಾಧ್ಯವಾಗದಿದ್ದರೆ ವಿದ್ಯುನ್ಮಾನ ವಾಹನಗಳನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ. ನಿಲೇಶ್ ಕಬ್ರಾಲ್ ಗೋವಾ ಬಿಜೆಪಿ ಸಂಪುಟದಲ್ಲಿ ಸಾರ್ವಜನಿಕ ವ್ಯವಹಾರಗಳ ಸಚಿವರಾಗಿದ್ದು, ಇತ್ತೀಚೆಗಷ್ಟೇ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಬಿಜೆಪಿ ಪಕ್ಷವು ಗೋವಾದಲ್ಲಿ ಸರ್ಕಾರವನ್ನು ರಚನೆ ಮಾಡಿತ್ತು.
ಇದನ್ನೂ ಓದಿ:ತಲೆಗೆ ಗನ್ಯಿಟ್ಟು ದರೋಡೆ, ಹಲ್ಲೆ ಆರೋಪ.. ಬಿಜೆಪಿ ಎಂಎಲ್ಎ ಪುತ್ರನ ವಿರುದ್ಧ ಎಫ್ಐಆರ್