ಕೊಟ್ಟಾಯಂ (ಕೇರಳ):ನಾವು ಅಧಿಕಾರಕ್ಕೆ ಬಂದರೆ ಶಬರಿಮಲೆ ದೇವಾಲಯದ ಕುರಿತು ಹೊಸ ಕಾನೂನು ಜಾರಿಗೊಳಿಸುತ್ತೇವೆ ಎಂದು ಕೇರಳದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಪಕ್ಷ ಹೇಳಿದೆ.
ಈಗಾಗಲೇ ಶಬರಿಮಲೆ ಮೇಲಿನ ನೂತನ ಕಾನೂನುಗಳ ಕರಡು ಪ್ರತಿ ಸಿದ್ಧವಾಗಿದ್ದು, ಅದನ್ನು ಶಾಸಕ ತಿರುವಂಚೂರ್ ರಾಧಾಕೃಷ್ಣನ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ರಾಧಾಕೃಷ್ಣನ್, ಹೊಸ ಕಾನೂನಿನ ಪ್ರಕಾರ ಶಬರಿಮಲೆ ನಿಯಮ ಉಲ್ಲಂಘಿಸುವವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ದೇವಾಲಯದ ಸಾರ್ವಭೌಮತ್ವವು ಅರ್ಚಕರ ಕೈಯಲ್ಲಿದ್ದು, ಈ ಕರಡು ಪ್ರತಿಯನ್ನು ಕಾನೂನು ಸಚಿವ ಎ.ಕೆ.ಬಾಲನ್ ಅವರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.