ಕರ್ನಾಟಕ

karnataka

ETV Bharat / bharat

ಬಿಜೆಪಿ ಅಧಿಕಾರಕ್ಕೆ ಬಂದರೆ ಕೇರಳದಲ್ಲಿ ಲವ್ ಜಿಹಾದ್ ನಿಷೇಧ.. ಕೇಂದ್ರ ಸಚಿವ ಸದಾನಂದಗೌಡ - ಸಿಎಂ ಕಚೇರಿ ಚಿನ್ನ ಕಳ್ಳಸಾಗಣೆ ಪ್ರಕರಣ

ಸಿಎಂ ಕಚೇರಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದೆ. ಸ್ಪೀಕರ್ ಮತ್ತು ಮಂತ್ರಿಗಳು ಆರೋಪಿ ಸ್ಥಾನದಲ್ಲಿರುವ ಸ್ವಪ್ನಾ ಸುರೇಶ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ. ರಾಜ್ಯದ ಅಗತ್ಯಗಳಿಗಾಗಿ ಕೇಂದ್ರ ಸಂಪರ್ಕಿಸಲು ಮುಖ್ಯಮಂತ್ರಿ ಹಿಂಜರಿಯುತ್ತಾರೆ..

if the BJP comes to power, love jihad will be banned in kerala as the UP model, says Union Minister Sadananda Gowda
ಸದಾನಂದ ಗೌಡ

By

Published : Mar 22, 2021, 9:55 PM IST

ಕೇರಳ: ಕೇಂದ್ರ ಸಚಿವ ಸದಾನಂದ ಗೌಡ ಅವರು ರಾಜ್ಯ ಸರ್ಕಾರ ಮತ್ತು ಕೇರಳ ಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇರಳ ಪ್ರಜಾಪ್ರಭುತ್ವ ಸರ್ಕಾರವಲ್ಲ ಎಂದು ಆರೋಪ ಮಾಡಿದ್ದಾರೆ.

ಕೇರಳ ಆಡಳಿತದಲ್ಲಿ ಪಾರದರ್ಶಕತೆ ಇಲ್ಲ. ಕಾನೂನಿನ ನಿಯಮ ಪಾಲಿಸುತ್ತಿಲ್ಲ. ಮುಖ್ಯಮಂತ್ರಿಯ ಸುತ್ತಲಿನ ಕೆಲ ಜನರು ರಾಜ್ಯ ಆಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕೇರಳ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಸದಾನಂದ ಗೌಡ ವಾಗ್ದಾಳಿ..

ಸಿಎಂ ಕಚೇರಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದೆ. ಸ್ಪೀಕರ್ ಮತ್ತು ಮಂತ್ರಿಗಳು ಆರೋಪಿ ಸ್ಥಾನದಲ್ಲಿರುವ ಸ್ವಪ್ನಾ ಸುರೇಶ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ. ರಾಜ್ಯದ ಅಗತ್ಯಗಳಿಗಾಗಿ ಕೇಂದ್ರ ಸಂಪರ್ಕಿಸಲು ಮುಖ್ಯಮಂತ್ರಿ ಹಿಂಜರಿಯುತ್ತಾರೆ. ಸಿಪಿಎಂ ದೇವಸ್ವಂ ಮಂಡಳಿಯನ್ನು ರಾಜಕೀಯ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ ಎಂದು ಹರಿಹಾಯ್ದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಎಲ್ಲವೂ ಬದಲಾಗುತ್ತದೆ, ಕೇರಳದಲ್ಲಿ ಲವ್ ಜಿಹಾದ್ ಅಸ್ತಿತ್ವದಲ್ಲಿದೆ. ಕ್ರಿಶ್ಚಿಯನ್ನರು ಮುಖ್ಯ ಬಲಿಪಶುಗಳಾಗುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಯುಪಿ ಮಾದರಿ ಲವ್ ಜಿಹಾದ್ ನಿಷೇಧಿಸಲಾಗುವುದು ಎಂದು ಭರವಸೆ ನೀಡಿದರು.

ABOUT THE AUTHOR

...view details