ಕರ್ನಾಟಕ

karnataka

ಪಾಕಿಸ್ತಾನದಲ್ಲಿ ಜೈ ಶ್ರೀರಾಮ್​ ಘೋಷಣೆ ಕೂಗೋಕಾಗುತ್ತಾ? - ದೀದಿಗೆ ಅಮಿತ್​ ಶಾ ಟಾಂಗ್​

By

Published : Feb 11, 2021, 3:28 PM IST

ಇಲ್ಲಿ ಬಿಟ್ಟು ಪಾಕಿಸ್ತಾನದಲ್ಲಿ ಜೈ ಶ್ರೀರಾಮ್​ ಘೋಷಣೆ ಕೂಗೋಕಾಗುತ್ತಾ? ಚುನಾವಣೆ ಮುಗಿಯುವಷ್ಟರಲ್ಲಿ ಮಮತಾ ದೀದಿ ಕೂಡ ಜೈ ಶ್ರೀರಾಮ್ ಎಂದು ಹೇಳುತ್ತಾರೆ ಎಂದು ಸಿಎಂ ಮಮತಾ ಬ್ಯಾನರ್ಜಿಗೆ ಅಮಿತ್​ ಶಾ ಟಾಂಗ್​ ನೀಡಿದರು.

Amit Shah
ದೀದಿಗೆ ಅಮಿತ್​ ಶಾ ಟಾಂಗ್​

ಕೂಚ್ ಬೆಹಾರ್ (ಪಶ್ಚಿಮ ಬಂಗಾಳ): ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುವುದು ಅಪರಾಧ ಎಂಬಂತಹ ವಾತಾವರಣ ಪಶ್ಚಿಮ ಬಂಗಾಳದಲ್ಲಿ ಸೃಷ್ಟಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

ದೀದಿ ಕೂಡ ಜೈ ಶ್ರೀರಾಮ್ ಎನ್ನುತ್ತಾರೆ

ಪಶ್ಚಿಮ ಬಂಗಾಳದ ಕೂಚ್ ಬೆಹಾರ್​ನಲ್ಲಿ ಇಂದಿನಿಂದ ಆರಂಭವಾಗಿರುವ 'ಪರಿವರ್ತನಾ ಯಾತ್ರೆ'ಗೆ ಚಾಲನೆ ನೀಡಿ ಸಾರ್ವಜನಿಕ ರ‍್ಯಾಲಿಯ್ನನುದ್ದೇಶಿಸಿ ಮಾತನಾಡಿದ ಅಮಿತ್​ ಶಾ, ಇಲ್ಲಿ ಬಿಟ್ಟು ಪಾಕಿಸ್ತಾನದಲ್ಲಿ ಜೈ ಶ್ರೀರಾಮ್​ ಘೋಷಣೆ ಕೂಗೋಕಾಗತ್ತಾ? ಚುನಾವಣೆ ಮುಗಿಯುವಷ್ಟರಲ್ಲಿ ಮಮತಾ ದೀದಿ ಕೂಡ ಜೈ ಶ್ರೀರಾಮ್ ಎಂದು ಹೇಳುತ್ತಾರೆ ಎಂದು ಸಿಎಂ ಮಮತಾ ಬ್ಯಾನರ್ಜಿಗೆ ಟಾಂಗ್​ ನೀಡಿದರು.

ಕೂಚ್ ಬೆಹಾರ್​ನಲ್ಲಿ ಅಮಿತ್​ ಶಾ

ಸುಭಾಷ್ ಚಂದ್ರ ಬೋಸ್​ ಜನ್ಮದಿನದ ನಿಮಿತ್ತ ಕೋಲ್ಕತ್ತಾದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ದೀದಿ ಭಾಷಣ ಮಾಡುವ ವೇಳೆ ನೆರೆದಿದ್ದ ಕೆಲವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಸರ್ಕಾರಿ ಕಾರ್ಯಕ್ರಮದಲ್ಲಿ ಹೀಗೆ ಘೋಷಣೆ ಕೂಗಿದ್ದಕ್ಕೆ ಆಕ್ರೋಶಗೊಂಡ ಮಮತಾ ಬ್ಯಾನರ್ಜಿ ಜೈ ಹಿಂದ್​, ಜೈ ಬಾಂಗ್ಲಾ ಎಂದು ಹೇಳಿ ಸಭೆಯಿಂದ ಹೊರನಡೆದಿದ್ದರು.

ಟಿಎಂಸಿ ಗೂಂಡಾಗಳು

130ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಗೂಂಡಾಗಳು ಕೊಂದಿದ್ದಾರೆ. ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಬ್ಬ ಕೊಲೆಗಾರನನ್ನೂ ಜೈಲಿಗೆ ಕಳುಹಿಸುತ್ತೇವೆ ಎಂದು ಶಾ ವಾಗ್ದಾನ ಮಾಡಿದರು.

ಸೋನಾರ್ ಬಾಂಗ್ಲಾ

ನಮ್ಮ ಗುರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಬದಲಿಸುವುದಲ್ಲ, ಬದಲಾಗಿ 'ಸೋನಾರ್ ಬಾಂಗ್ಲಾ' (ಸುವರ್ಣ ಬಂಗಾಳ) ನಿರ್ಮಿಸುವುದಾಗಿದೆ. ಟಿಎಂಸಿ ಮತ್ತು ಕಮ್ಯುನಿಸ್ಟ್ ಪಕ್ಷಗಳು ರಾಜ್ಯದ ಅಭಿವೃದ್ಧಿಗೆ ಏನೂ ಮಾಡಿಲ್ಲ. ನಾವು 'ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​' ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತೇವೆ ಎಂದು ಬಂಗಾಳದ ಜನರಿಗೆ ಆಶ್ವಾಸನೆ ನೀಡಿದರು.

ABOUT THE AUTHOR

...view details