ಕರ್ನಾಟಕ

karnataka

ETV Bharat / bharat

ಆರ್ಥಿಕ ಕರಾಳತೆ ಹಿನ್ನೆಲೆ ಸರ್ಕಾರ ನೋಟು ಮುದ್ರಿಸುವ ಪರಿಸ್ಥಿತಿ ಬಂದಿದೆ: ಚಿದಂಬರಂ ಆತಂಕ - Congress

2020–21ರ ಹಣಕಾಸಿನ ವರ್ಷದ 4 ತ್ರೈಮಾಸಿಕದ ವರದಿಗಳು ಜಿಡಿಪಿ ಕರುಣಾಜನಕ ಕಥೆಯನ್ನು ಹೇಳುತ್ತವೆ. ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಹೀಗಾಗಿ ಸರ್ಕಾರ ನೋಟುಗಳನ್ನು ಮುದ್ರಿಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಪಿ ಚಿದಂಬರಂ ಆತಂಕ
ಪಿ ಚಿದಂಬರಂ ಆತಂಕ

By

Published : Jun 2, 2021, 11:51 AM IST

ನವದೆಹಲಿ: ಕಳೆದ ನಲವತ್ತು ವರ್ಷಗಳಲ್ಲೇ ಭಾರತದ ಆರ್ಥಿಕತೆಯ ಪಾಲಿಗೆ 2020–21ನೇ ಹಣಕಾಸಿನ ವರ್ಷ ಕರಾಳ ವರ್ಷವಾಗಿ ಪರಿಣಿಮಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಕುರಿತು ನಡೆದ ವರ್ಚುವಲ್ ಸಂವಾದದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. 2020–21ರ ಜಿಡಿಪಿ 2018–19ರ ಜಿಡಿಪಿಗಿಂತಲೂ ಕಡಿಮೆಯಿದೆ. 2020–21ರ ಹಣಕಾಸಿನ ವರ್ಷದ 4 ತ್ರೈಮಾಸಿಕದ ವರದಿಗಳು ಜಿಡಿಪಿ ಕರುಣಾಜನಕ ಕಥೆಯನ್ನು ಹೇಳುತ್ತವೆ. ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಹೀಗಾಗಿ ಸರ್ಕಾರ ನೋಟುಗಳನ್ನು ಮುದ್ರಿಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷದ ಮಧ್ಯಂತರದಲ್ಲಿ ಹಣಕಾಸು ಸಚಿವರು ಆರ್ಥಿಕತೆಯಲ್ಲಿ ಹಸಿರೆಲೆಗಳು(ಉತ್ತಮ ಬೆಳವಣಿಗೆ) ಗೋಚರಿಸುತ್ತಿವೆ ಎಂದು ಹೇಳಿದ್ದರು. ಇದೇನಾ ಆರ್ಥಿಕತೆಯ ಹಸಿರು? ಎಂದು ಅವರು ಪ್ರಶ್ನಿಸಿದ್ದಾರೆ. ದೇಶದ ತಲಾ ಆದಾಯವೂ ಕೂಡ ಕಳೆದ ಒಂದು ವರ್ಷದಲ್ಲಿ ಶೇ. 8.2ರಷ್ಟು ಕುಸಿದಿದೆ. ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ ಭಾರತದ ಬಡವರ ಪ್ರಮಾಣ ತೀರಾ ಏರಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸೋಮವಾರ ರಾಷ್ಟ್ರೀಯ ಅಂಕಿ-ಸಂಖ್ಯೆಗಳ ಕಚೇರಿ ಜಿಡಿಪಿಗೆ ಸಂಬಂಧಿಸಿದಂತೆ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ 2020–21ರಲ್ಲಿ ಭಾರತದ ಜಿಡಿಪಿ ಶೇ. 7.3ಕ್ಕೆ ಕುಸಿತಗೊಂಡಿದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details