ಹೈದರಾಬಾದ್(ತೆಲಂಗಾಣ):ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ದೀಕ್ಷಾಂತ್ ಸಮರೋಹ ಸಮಾರಂಭ(Deekshanth Samaroh ceremony) ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (National Security Advisor Ajith Doval) ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಐಪಿಎಸ್ ಪ್ರೊಬೇಷನರಿಗಳ 73ನೇ ಬ್ಯಾಚ್‌ನ ಪಾಸಿಂಗ್ ಔಟ್ ಪರೇಡ್ ಅನ್ನು ಅಕಾಡೆಮಿಯಲ್ಲಿ ನಡೆಸಲಾಯಿತು. ದೋವಲ್ ಅಧಿಕಾರಿಗಳಿಂದ ಶುಭಾಶಯ ಕೋರಿದರು. ಪರೇಡ್‌ನಲ್ಲಿ 149 ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು, ಅವರಲ್ಲಿ 31 ಮಹಿಳಾ ಅಧಿಕಾರಿಗಳಿದ್ದರು.
17 ಮಂದಿ ವಿದೇಶಿ ತರಬೇತಿ ಅಧಿಕಾರಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (SVPNA)ಯಲ್ಲಿ ತರಬೇತಿ ಪಡೆದಿದ್ದಾರೆ. ಸತತ 3ನೇ ಬಾರಿಗೆ ದರ್ಪಣ್ ಅಹ್ಲುವಾಲಿಯಾ ಪರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತರಬೇತಿಯಲ್ಲಿ ಉತ್ತಮ ಪ್ರತಿಭೆ ತೋರಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ತೆಲಂಗಾಣಕ್ಕೆ ನಾಲ್ವರು ಟ್ರೈನಿ ಐಪಿಎಸ್‌ಗಳನ್ನು ಹಾಗೂ ಆಂಧ್ರಪ್ರದೇಶಕ್ಕೆ ಐವರು ಟ್ರೈನಿ ಐಪಿಎಸ್‌ಗಳನ್ನು ನೇಮಿಸಲಾಗಿದೆ.