ಕರ್ನಾಟಕ

karnataka

ETV Bharat / bharat

ಒಬ್ಬ ಚಾಯ್​ವಾಲಾ ಅಲ್ದೇ ಮತ್ತ್ಯಾರು ನಿಮ್ಮ ನೋವು ಅರ್ಥ ಮಾಡ್ಕೊಳ್ತಾರೆ?: ಅಸ್ಸೋಂನಲ್ಲಿ ಮೋದಿ ಪ್ರಶ್ನೆ

ಕಾಂಗ್ರೆಸ್ ತನ್ನ ಲಾಭಕ್ಕಾಗಿ ಯಾರನ್ನ ಬೇಕಾದರೂ ಅಪಾಯಕ್ಕೆ ಸಿಲುಕಿಸುತ್ತದೆ ಎಂಬುದನ್ನು ನೆನಪಿಡಿ ಎನ್ನುವ ಮೂಲಕ ಟೂಲ್​ಕಿಟ್​ ಪ್ರಕರಣದಲ್ಲಿ ಕಾಂಗ್ರೆಸ್​ ನಡೆಯನ್ನು ಟೀಕಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಸ್ಸೋಂ ಜನತೆಗೆ ಎಚ್ಚರಿಕೆ ನೀಡಿದರು.

PM Modi in Chabua
ಪ್ರಧಾನಿ ನರೇಂದ್ರ ಮೋದಿ

By

Published : Mar 20, 2021, 5:15 PM IST

ಚಾಬುವಾ (ಅಸ್ಸೋಂ): ವಿಧಾನಸಭಾ ಚುನಾವಣೆ ಹಿನ್ನೆಲೆ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಅಸ್ಸೋಂನ ಚಾಬುವಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು.

ಒಬ್ಬ ಚಾಯ್​ವಾಲಾ ನಿಮ್ಮ ನೋವನ್ನ ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಮತ್ತ್ಯಾರು ಮಾಡಿಕೊಳ್ಳುತ್ತಾರೆ? ಚಹಾ ಕಾರ್ಮಿಕರ ಜೀವನ ಮಟ್ಟವನ್ನು ಇನ್ನಷ್ಟು ಸುಧಾರಿಸುವ ಪ್ರಯತ್ನಗಳನ್ನು ಎನ್‌ಡಿಎ ಸರ್ಕಾರ ಚುರುಕುಗೊಳಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಪಿಎಂ ಮೋದಿ ಹೇಳಿದರು.

ಅಸ್ಸೋಂನ ಚಾಬುವಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಪಿಎಂ ಮೋದಿ ಮಾತು

ಕಾಂಗ್ರೆಸ್ ಪಕ್ಷವು ಟೂಲ್​ಕಿಟ್​ ತಯಾರಕರು, ಆ ಮೂಲಕ ತಮ್ಮ ಉದ್ದೇಶವನ್ನ ಎಲೆಕ್ಟ್ರಾನಿಕ್​ ಸಾಧನಗಳ ಮೂಲಕ ಹಂಚಿದವರನ್ನು ಬೆಂಬಲಿಸಿ, ಇಲ್ಲಿ ಬಂದು ಮತ ಕೇಳುತ್ತಾರೆ. 50 ರಿಂದ 55 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್, ಭಾರತದ ಚಹಾದ ಖ್ಯಾತಿಯನ್ನು ಹಾಳು ಮಾಡಲು ಯತ್ನಿಸಿದವರನ್ನ ಬೆಂಬಲಿಸುತ್ತಿರುವುದನ್ನು ನೋಡಿ ನನಗೆ ನೋವಾಯಿತು. ಅಂತಹ ಪಕ್ಷವನ್ನು ನೀವು ಕ್ಷಮಿಸುವಿರಾ? ಅವರಿಗೆ ಶಿಕ್ಷೆಯಾಗಬೇಕಾ ಅಥವಾ ಬೇಡವೇ? ಎಂದು ಮೋದಿ ಕಿಡಿಕಾರಿದರು.

ಇದನ್ನೂ ಓದಿ: ಬಂಗಾಳದಲ್ಲಿ ಈ ಬಾರಿ ಬಿಜೆಪಿ ಸರ್ಕಾರ.. ನಿಮಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಎಂದ ಮೋದಿ

ಅಸ್ಸೋಂ ಸಂಸ್ಕೃತಿ ಮತ್ತು ಪರಂಪರೆಗೆ ಅಪಾಯಕಾರಿಯಾಗಿರುವ ಪಕ್ಷಗಳೊಂದಿಗೆ ಕಾಂಗ್ರೆಸ್ ಕೈಜೋಡಿಸಿದೆ. ತೈವಾನ್​, ಶ್ರೀಲಂಕಾದ ಫೋಟೋ ತೋರಿಸಿ ಅಸ್ಸೋಂ ಎಂದು ಹೇಳಿದ ಪಕ್ಷವದು. ಇದು ಸುಂದರ ಅಸ್ಸೋಂ ರಾಜ್ಯಕ್ಕೆ ಮಾಡಿದ ಅನ್ಯಾಯ ಹಾಗೂ ಅಪಮಾನವಾಗಿದೆ ಎಂದು ಪ್ರಧಾನಿ ಆರೋಪಿಸಿದರು.

ಕಳೆದ 5 ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ನಿರ್ಮಿಸಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇಲ್ಲಿ ಲೂಟಿ ಮಾಡಲು ಬಯಸುತ್ತವೆ. ಆದ್ದರಿಂದ ನೀವು ಜಾಗರೂಕರಾಗಿರಬೇಕು. ಕಾಂಗ್ರೆಸ್ ತನ್ನ ಲಾಭಕ್ಕಾಗಿ ಯಾರನ್ನ ಬೇಕಾದರೂ ಅಪಾಯಕ್ಕೆ ಸಿಲುಕಿಸುತ್ತದೆ ಎಂಬುದನ್ನು ನೆನಪಿಡಿ ಎಂದು ಎಚ್ಚರಿಕೆ ನೀಡಿದ ಮೋದಿ, ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ನಾವು ರಕ್ಷಿಸುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಅಸ್ಸೋಂನ ಪ್ರತಿಯೊಂದು ಪ್ರದೇಶದ ಅಭಿವೃದ್ಧಿಯು ಬಿಜೆಪಿ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.

ABOUT THE AUTHOR

...view details