ಕಾಂಚೀಪುರಂ/ತಮಿಳುನಾಡು :ಎಐಎಡಿಎಂಕೆ ಒಂದೇ ಸ್ಥಾನದಲ್ಲಿ ಜಯಗಳಿಸಿದರೂ ಗೆಲುವು ಬಿಜೆಪಿಯದ್ದಾಗಿರುತ್ತದೆ. ಹಾಗಾಗಿ, ಏಪ್ರಿಲ್ 6ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಡಿಎಂಕೆ ಮತ್ತು ಇದರೊಂದಿಗಿರುವ ಮಿತ್ರ ಪಕ್ಷಗಳಿಗೆ ಮತ ಚಲಾಯಿಸಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಮನವಿ ಮಾಡಿದರು.
ಉತಿರಾಮೆರುರ್ನಲ್ಲಿ ನಡೆದ ಅಭಿಯಾನದಲ್ಲಿ ಮಾತನಾಡಿದ ಅವರು, 234 ಸ್ಥಾನಗಳಲ್ಲಿ 200 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ತಿಳಿಸಿದರು. ರಾಜ್ಯಾದ್ಯಂತ ಅವರ ನಿರಂತರ ಅಭಿಯಾನಕ್ಕೆ ಜನರಿಂದ ಬಂದ ಪ್ರತಿಕ್ರಿಯೆಯನ್ನು ಪರಿಗಣಿಸಿ, ತಾವು ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.